ಕುಶಾಲನಗರ, ಫೆ. 16: ಕುಶಾಲನಗರ ಸಮೀಪದ ಆನೆಕಾಡು ಬಳಿ ಪ್ರಯಾಣಿಕನೋರ್ವ ರಸ್ತೆ ದಾಟುತ್ತಿದ್ದ ಸಂದರ್ಭ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.

ಮೂಡಬಿದಿರೆ ನಿವಾಸಿ ಶಿರಾಜ್ (36) ಮೃತ ವ್ಯಕ್ತಿ. ಮಂಗಳೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್‍ನಲ್ಲಿ ತೆರಳುತ್ತಿದ್ದ ಸಂದರ್ಭ ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಆನೆಕಾಡು ಹೋಟೆಲ್ ಒಂದರ ಬಳಿ ಮೂತ್ರ ವಿಸರ್ಜನೆಗೆಂದು ಇಳಿದ ಸಂದರ್ಭ ಘಟನೆ ನಡೆದಿದೆ.

ಸುಂಟಿಕೊಪ್ಪ ಕಡೆಯಿಂದ ವೇಗವಾಗಿ ಆಗಮಿಸಿದ ಸ್ವಿಫ್ಟ್ ಕಾರೊಂದು ಸ್ಥಳದಲ್ಲಿದ್ದ ಬ್ಯಾರಿಕೆಡ್ ಹಾಗೂ ನಿಂತಿದ್ದ ಕಾರೊಂದಕ್ಕೆ ಡಿಕ್ಕಿಯಾಗಿ ಮೂತ್ರ ವಿಸರ್ಜಿಸುತ್ತಿದ್ದ ಇಬ್ಬರು ಪ್ರಯಾಣಿಕರಿಗೆ ಅಪ್ಪಳಿಸಿದೆ. ಘಟನೆಯಿಂದ ಶಿರಾಜ್ ಸ್ಥಳದಲ್ಲೇ ಮೃತಪಟ್ಟಿದ್ದು ಈತನೊಂದಿಗಿದ್ದ ಅಜ್ವೀರ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಪ್ರಥಮ ಚಿಕಿತ್ಸೆ ಬಳಿಕೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯ ಲಾಗಿದೆ.

ಸ್ವಿಫ್ಟ್ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.