ನಾಪೆÇೀಕ್ಲು, ಫೆ. 16: ಇತ್ತೀಚಿನ ವರ್ಷಗಳಲ್ಲಿ ಕಾಳುಮೆಣಸು ಬಳ್ಳಿಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಬೆಳೆಗಾರರು ಕೃಷಿ ಮತ್ತು ತೋಟಗಾರಿಕಾ ತಜ್ಞರ ಸಲಹೆಯಂತೆ ರೋಗ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಸಲಹೆ ನೀಡಿದರು.
ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯಿತಿ, ನಾಪೆÇೀಕ್ಲು ಕೊಡವ ಸಮಾಜ, ನಾಲ್ಕುನಾಡು ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್, ಕೊಡಗು ಪ್ಲಾಂಟರ್ಸ್ ಅಸೋಸಿ ಯೇಷನ್ ಸಂಯುಕ್ತ ಆಶ್ರಯದಲ್ಲಿ ನಾಪೆÇೀಕ್ಲು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾಳುಮೆಣಸು ಬೇಸಾಯದ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು. ಬೆಳೆಗಾರರು ಕೃಷಿ ವಿಜ್ಞಾನಿಗಳಿಂದ ತಾಂತ್ರಿಕ, ಅಧಿಕಾರಿಗಳಿಂದ ರೋಗ ಲಕ್ಷಣ ಮತ್ತು ಅದರ ನಿವಾರಣೆಗೆ ಅನುಸರಿಸಬೇಕಾದ ವಿಧಾನಗಳು ಮತ್ತು ಔಷಧಿಗಳ ಬಗ್ಗೆ ಮಾಹಿತಿ ಪಡೆದು ಬೆಳೆ ರಕ್ಷಣೆÉಯತ್ತ ಗಮನ ಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಎಸ್. ಚಂದ್ರಶೇಖರ್, ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಕೊಡಗು ಪ್ಲಾಂಟರ್ಸ್ ಅಸೋಸಿ ಯೇಷನ್ ಅಧ್ಯಕ್ಷ ಬೊಪ್ಪಂಡ ಡಾ. ಜಾಲಿ ಬೋಪಯ್ಯ, ಅಧ್ಯಕ್ಷತೆ ವಹಿಸಿದ್ದ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಮಾತನಾಡಿದರು.
ಕಾಳುಮೆಣಸು ರೋಗ ಲಕ್ಷಣಗಳು ಮತ್ತು ನಿವಾರಣಾ ಕ್ರಮಗಳ ಬಗ್ಗೆ ಬೆಳೆಗಾರರಿಗೆ ವಿವರಣೆ ನೀಡಿದ ಅಪ್ಪಂಗಳದ ಸಿ.ಪಿ.ಸಿ.ಆರ್.ಐ. ಏಲಕ್ಕಿ ಸಂಶೋಧನ ಕೇಂದ್ರದ ಹಿರಿಯ ವಿಜ್ಞಾನಿ ಅಂಕೇಗೌಡ ಕಾಳುಮೆಣಸು ಬಳ್ಳಿಯನ್ನು ಕಾಡುವ ಕೀಟಗಳು, ಅದಕ್ಕೆ ತಗಲುವ ರೋಗಗಳು, ಅದನ್ನು ತಡೆಗಟ್ಟುವ ವಿಧಾನ, ನೀಡುವ ರಸಗೊಬ್ಬರದ ಪ್ರಮಾಣ, ಬೇಸಿಗೆಯಲ್ಲಿ ನೀರುಣಿಸುವಿಕೆ, ಜನವರಿಯಿಂದ ಡಿಸೆಂಬರ್‍ವರೆಗೆ ಪ್ರತೀ ತಿಂಗಳು ಮಾಡಬೇಕಾದ ಕೆಲಸಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ನಾಲ್ಕುನಾಡು ಪ್ಲಾಂಟರ್ ರಿಕ್ರಿ ಯೇಷನ್ ಅಸೋಸಿಯೇಷನ್ ಅಧ್ಯಕ್ಷ ಕಾಂಡಂಡ ಜಯಾ ಕರುಂಬಯ್ಯ, ನಾಪೆÇೀಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಎಸ್. ಉದಯಶಂಕರ್, ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕ ಪಾಡಿಯಮ್ಮಂಡ ಮನು ಮಹೇಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಆರ್.ಎಂ.ಸಿ ನಿರ್ದೇಶಕ ವಾಂಚಿರ ಜಯಾ ನಂಜಪ್ಪ, ಎ.ಎಂ. ಗಣೇಶ್ ಮೂರ್ತಿ, ಕಾಫಿ ಮಂಡಳಿ ಉಪ ನಿರ್ದೇಶಕ ಜಗದೀಶ್, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ವೀರೇಂದ್ರ ಕುಮಾರ್, ಪ್ರಗತಿಪರ ಕಾಳುಮೆಣಸು ಬೆಳೆಗಾರ ಪೆÇನ್ನಿಮಾಡ ಸುಬ್ರಮಣಿ ಇದ್ದರು.