88ನೇ ಮಹಾ ಮಸ್ತಕಾಭಿಷೇಕಕ್ಕೆ ಚಾಲನೆ ಹಾಸನ, ಫೆ. 17: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಬಾಹುಬಲಿಯ 88ನೇ ಮಹಾ ಮಸ್ತಕಾಭಿಷೇಕಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈರಾಗ್ಯಮೂರ್ತಿಗೆ ಜಲಾಭಿಷೇಕ ಮಾಡಿದರು. ಇಂದು ಮಧ್ಯಾಹ್ನ ವರ್ಧಮಾನ ಸಾಗರ್ ಮಹಾರಾಜ್ ಅವರು ಈ ಶತಮಾನದ ಎರಡನೇ ಮಹಾ ಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದರು. ಬಳಿಕ ಜೈನ ಮಹಾಮುನಿಗಳು, ಆಚಾರ್ಯರು ಮತ್ತು ಗಣ್ಯರು ಜಲಾಭಿಷೇಕ ಮಾಡುವ ಮೂಲಕ ವಿಧಿ ವಿಧಾನಗಳನ್ನು ಆರಂಭಿಸಿದ್ದಾರೆ. ವರ್ಧಮಾನ ಸಾಗರ್ ಮುನಿ ಅವರು ಮೊದಲ ಜಲಾಭಿಷೇಕವನ್ನು ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೋಲಿಯನ್ನು ಬಿಟ್ಟು ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿ ಬಾಹುಬಲಿ ಮೂರ್ತಿಗೆ ಜಲಾಭಿಷೇಕ ಮಾಡಿದರು. ಅವರೊಂದಿಗೆ ಸಚಿವ ಎ. ಮಂಜು, ಸಚಿವೆ ಉಮಾಶ್ರೀ ಅವರು ಭಾಗವಹಿಸಿದ್ದರು.
ಜೆಡಿಎಸ್ ಸಮಾವೇಶದಲ್ಲಿ ಮಾಯಾವತಿ ವಾಗ್ದಾಳಿ
ಬೆಂಗಳೂರು, ಫೆ. 17: ಕಾಂಗ್ರೆಸ್ ಮತ್ತು ಬಿಜೆಪಿಗೆ ಪಾಠ ಕಲಿಸುವ ಸಮಯ ಈಗ ಬಂದಿದ್ದು, ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಿ. ಸರ್ವರಿಗೂ ಸಮಪಾಲು ಎಂಬ ತತ್ವದಡಿ ಸರ್ಕಾರ ನಡೆಸುತ್ತೇವೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಶನಿವಾರ ಹೇಳಿದ್ದಾರೆ. ಇಂದು ಯಲಹಂಕದಲ್ಲಿ ಜೆಡಿಎಸ್ ವಿಕಾಸ ಪರ್ವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ ಅವರು, ರಾಜ್ಯ ಸರ್ಕಾರ ದಲಿತರ ಪರವಾದ ಯಾವದೇ ಯೋಜನೆಗಳನ್ನು ರೂಪಿಸಿಲ್ಲ. ಹೀಗಾಗಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯದಂತೆ ತಡೆಯಬೇಕಾದ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದರು. ಕಾಂಗ್ರೆಸ್ ಕುತಂತ್ರದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿತ್ತು. ಅಷ್ಟೆ ಅಲ್ಲ ಅವರು ಡಾ. ಅಂಬೇಡ್ಕರ್ ಅವರಿಗೆ ಭಾರತರತ್ನ ಗೌರವನ್ನೂ ನೀಡದೆ ಅವಮಾನ ಮಾಡಿದ್ದರು ಎಂದು ಮಾಯಾವತಿ ಆರೋಪಿಸಿದರು.
ಅಲ್ಖೈದಾ ಉಗ್ರನಿಗೆ ಜೀವಾವಧಿ ಶಿಕ್ಷೆ
ನ್ಯೂಯಾರ್ಕ್, ಫೆ. 17: ಒಸಾಮಾ ಬಿನ್ ಲಾಡೆನ್‍ನ ಅಲ್ಖೈದಾ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕನೊಬ್ಬನಿಗೆ ಅಮೇರಿಕಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಅಲ್ಖೈದಾ ಉಗ್ರಗಾಮಿ ಇಬ್ರಾಹಿಂ ಸುಲೇಮಾನ್ ಆದ್ನಾನ್ ಆಡಂ ಹರೂನ್ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದು ಆಫ್ಘಾನಿಸ್ಥಾನದಲ್ಲಿ ಅಮೇರಿಕಾ ಸೇನಾ ಯೋಧರ ಹತ್ಯೆ ಮತ್ತು ನೈಜೀರಿಯಾದ ಯುಎಸ್‍ಎ ರಾಯಭಾರಿ ಕಚೇರಿ ಮೇಲೆ ಬಾಂಬ್ ಧಾಳಿ ಪ್ರಕರಣದಲ್ಲಿ ಈತನ ಕೈವಾಡವಿತ್ತು. ಅಮೇರಿಕಾದಲ್ಲಿ ಒಸಾಮಾ ಬಿನ್ ಲಾಡೆನ್ ನಡೆಸಿದ್ದ ಉಗ್ರ ಧಾಳಿಗೆ ಒಂದು ವಾರದ ಮುನ್ನ ಈತ ಅಲ್ಖೈದಾಗೆ ಸೇರ್ಪಡೆಯಾಗಿದ್ದ. ಆ ಬಳಿಕ ನಾನಾ ಭಯೋತ್ಪಾದಕ ದಾಳಿಗಳಲ್ಲಿ ಈತ ಪಾಲ್ಗೊಂಡಿದ್ದ ಎಂದು ಅಮೇರಿಕಾ ಪೆÇಲೀಸ್ ತನಿಖಾ ದಳದ ಕಮಿಷನರ್ ಜೇಮ್ಸ್ ಪಿ.ಒ. ನೀಲ್ ಹೇಳಿದ್ದಾರೆ.
ಆತ್ಮಹತ್ಯಾ ಬಾಂಬ್ ಧಾಳಿಗೆ 19 ಬಲಿ
ನೈಜೀರಿಯಾ, ಫೆ. 17: ಈಶಾನ್ಯ ನೈಜೀರಿಯಾದ ಮೀನು ಮಾರುಕಟ್ಟೆಯಲ್ಲಿ ಮೂರು ಆತ್ಮಹತ್ಯಾ ಬಾಂಬರ್‍ಗಳು 19 ಜನರನ್ನು ಹತ್ಯೆ ಮಾಡಿದ್ದಾರೆ. ಬೊಕೊ ಹರಾಮ್ ಜಿಹಾದಿಗಳ ಗುಂಪಿಗೆ ಸೇರಿದ್ದವರು ನಡೆಸಿದ ಧಾಳಿಯಲ್ಲಿ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಮಿಲಿಟಿಯ ನಾಯಕರು ಹೇಳಿದರು. ಬೊರ್ನೊ ರಾಜ್ಯದ ರಾಜಧಾನಿ ಮೈಗುಗುರಿಯ ಆಗ್ನೇಯಕ್ಕೆ ಸುಮಾರು 35 ಕಿಲೋಮೀಟರ್ (20 ಮೈಲುಗಳು) ದೂರದ ಕೊಂಡುಗದಲ್ಲಿನಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಸ್ಫೋಟ ಸಂಭವಿಸಿದೆ. ಬಾಂಬ್ ಸ್ಫೋಟ ನಡೆಸಿದ್ದ ಉಗ್ರರೆಲ್ಲರೂ ಪುರುಷರಾಗಿದ್ದರೆಂದು ಟಾಸ್ಕ್ ಫೆÇೀರ್ಸ್ ಅಧಿಕಾರಿಗಳು ಹೇಳಿದ್ದಾರೆ. ಒಟ್ಟು 19 ಮಂದಿ ಸತ್ತು 70 ಮಂದಿ ಗಾಯಗೊಂಡಿದ್ದಾರೆ. ಇಬ್ಬರು ಉಗ್ರರು ತಶಾನ್ ಕಿಫಿ ಮೀನು ಮಾರುಕಟ್ಟೆಯಲ್ಲಿ ಆಕ್ರಮಣ ನಡೆಸಿದ್ದರು.