*ಗೋಣಿಕೊಪ್ಪಲು, ಫೆ. 16: ಸಮಯ ಪ್ರಜ್ಞೆ, ಸಂಬಂಧದ ಬೆಸುಗೆ ಉತ್ತಮವಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಶಿವಮೊಗ್ಗದ ಜೆ.ಸಿ.ಐ. ಮಾಜಿ ರಾಷ್ಟ್ರೀಯ ನಿರ್ದೇಶಕ ಎಲ್.ಕೆ. ಮುರಳೀಧರ್ ಹೇಳಿದರು. ಪೊನ್ನಂಪೇಟೆ ಗೋಲ್ಡನ್ ಜೇಸಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ವ್ಯಕ್ತಿತ್ವ ವಿಕಸನ ಜೆ.ಸಿ.ಐ.ನಲ್ಲಿ ಸಿಗುವ ಬಹು ದೊಡ್ಡ ಆಸ್ತಿ. ಸಮಯ ನಮಗಾಗಿ ಸಿಗುವದಿಲ್ಲ. ನಾವು ಸಮಯವನ್ನು ಕಂಡುಕೊಳ್ಳಬೇಕು. ಜೆ.ಸಿ.ಐ. ವ್ಯಾಪಾರ-ವಹಿವಾಟು ಹಾಗೂ ಜೀವನ ನಿರ್ವಹಣೆಯ ದಾರಿ ತೋರಿಸಲಿದೆ ಎಂದು ನುಡಿದರು. ಮುಖ್ಯ ಅತಿಥಿಯಾಗಿದ್ದ ಜೆ.ಸಿ.ಐ. ವಲಯ 14ರ ಅಧ್ಯಕ್ಷ ವಿಕಾಸ್ ಗುಗ್ಲಿಯ ಉಪಾಧ್ಯಕ್ಷ ಜೆಫಿನ್ ಜಾಯ್ ಮಾತನಾಡಿದರು. 2108 ನೇ ಸಾಲಿನ ಅಧ್ಯಕ್ಷರಾಗಿ ಎಂ.ಟಿ. ಅರಸು ನಂಜಪ್ಪ, ನಿಕಟಪೂರ್ವ ಅಧ್ಯಕ್ಷ ಪಿ.ಆರ್. ಪ್ರದೀಪ್ ಅವರಿಂದ ಅಧಿಕಾರ ಸ್ವೀಕರಿಸಿದರು. ಘಟಕದ ನೂತನ ಪದಾಧಿಕಾರಿಗಳಾದ ನಟೇಶ್ ತಿಮ್ಮಯ್ಯ, ರಘು ತಿಮ್ಮಯ್ಯ, ಸಿ.ಪಿ. ಬೋಪಣ್ಣ, ಕೆ. ನಾಣಯ್ಯ, ದಿನೇಶ್ ಚಿಟ್ಟಿಯಪ್ಪ, ದಿಲನ್ ಚಂಗಪ್ಪ, ಎಂ.ಬಿ. ಬೋಪಣ್ಣ, ಎಂ.ಪಿ. ಉತ್ತಪ್ಪ, ಕೆ.ಎಸ್. ಮೊಣ್ಣಪ್ಪ, ಕೆ.ಎ. ಗಿರಿ, ಕೆ.ಜಿ. ಸತೀಶ್, ಕಲ್ಪ ಕಾವೇರಮ್ಮ, ತಶ್ವಿನ್ ಜೋಯಪ್ಪ ಅವರಿಗೆ ನೂತನ ಅಧ್ಯಕ್ಷ ಎಂ.ಟಿ. ಅರಸು ನಂಜಪ್ಪ ಪ್ರಮಾಣ ವಚನ ಬೋಧಿಸಿದರು

ಕಾರ್ಯದರ್ಶಿ ಎಂ.ಬಿ. ಬೋಪಣ್ಣ, ನಿಕಟಪೂರ್ವ ಅಧ್ಯಕ್ಷ ಪಿ.ಬಿ. ನಟೇಶ್ ಹಾಜರಿದ್ದರು.