ಸೋಮವಾರಪೇಟೆ, ಫೆ. 16 : ಕಳೆದ ತಾ. 8ರಂದು ಸುಂಟಿಕೊಪ್ಪದ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ ಸರ್ಕಾರಿ ಬಸ್ ಚಾಲಕ, ಸೋಮವಾರಪೇಟೆಯ ಬೆಳ್ಳಾರಳ್ಳಿ ನಿವಾಸಿ ಪಾಲಾಕ್ಷ ಅವರ ಕುಟುಂಬಕ್ಕೆ ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಬೆಳ್ಳಾರಳ್ಳಿ ಗ್ರಾಮದ ಮೃತರ ಮನೆಗೆ ತೆರಳಿದ ಸಂಘದ ಪದಾಧಿಕಾರಿಗಳು ಸಂಘದ ಮರಣ ನಿಧಿಯಡಿ ರೂ. 15 ಸಾವಿರ ಹಣವನ್ನು ಮೃತರ ಪತ್ನಿ ಜ್ಯೋತಿ ಅವರಿಗೆ ಹಸ್ತಾಂತರಿಸಿ, ಸಾಂತ್ವನ ಹೇಳಿದರು. ಈ ಸಂದರ್ಭ ಮೋಟಾರ್ ಯೂನಿಯನ್ ಅಧ್ಯಕ್ಷ ಸಿ.ಸಿ. ನಂದ, ಕಾರ್ಯದರ್ಶಿ ಬಾಲಕೃಷ್ಣ, ಪದಾಧಿಕಾರಿಗಳಾದ ಶೇಷಪ್ಪ, ಡ್ಯಾನಿಯಲ್, ನಾಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.