ಮಡಿಕೇರಿ, ಫೆ. 17: ಮೂರ್ನಾಡು ಸಮೀಪದ ಕಣ್ಣಬಲಮುರಿ ಶ್ರೀ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆಯ 5ನೇ ವರ್ಷದ ಪ್ರಯುಕ್ತ ತಾ. 19ರಂದು ಚಂಡಿಕಾಯಾಗ ಮತ್ತು ಸಭಾಭವನದ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯ ನಡೆಯಲಿದೆ.ಬೆಳಿಗ್ಗೆ 6.30 ಗಂಟೆಗೆ ಪುಣ್ಯಾಹ, ಸ್ಥಳಶುದ್ಧಿ, 7 ಗಂಟೆಗೆ ಗಣಪತಿ ಹೋಮ, ನಂತರ ತಿಲಹೋಮ, 10 ಗಂಟೆಗೆ ಸಭಾಭವನದ ನೂತನ ಕಟ್ಟಡದ ಭೂಮಿಪೂಜೆ ನೆರವೇರಲಿದೆ.ಭೂಮಿಪೂಜೆಯನ್ನು ಐ.ಎನ್.ಟಿ.ಯು.ಸಿ. ರಾಜ್ಯ ಉಪಾಧ್ಯಕ್ಷ ನಾಪಂಡ ಎಂ. ಮುತ್ತಪ್ಪ ನೆರವೇರಿಸಲಿದ್ದಾರೆ. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿ.ಪಂ. ಸದಸ್ಯ ಪಿ. ಮುರುಳಿ ಕರುಂಬಮಯ್ಯ, ಹೊದ್ದೂರು ಗ್ರಾ.ಪಂ. ಅಧ್ಯಕ್ಷ ಕೆ.ಪಿ. ದಿನೇಶ್, ಸದಸ್ಯ ಬಿ.ಡಿ. ಉಮೇಶ್ ಪಾಲ್ಗೊಳ್ಳಲಿದ್ದಾರೆ ಎಂದು ದೇವಾಲಯ ಸಮಿತಿ ತಿಳಿಸಿದೆ.