ಗೋಣಿಕೊಪ್ಪಲು, ಫೆ. 16 : ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ಮುಂದುವರೆದಿದ್ದು ಬೀರುಗ ಬಳಿ ವ್ಯಾಘ್ರನ ಅಟ್ಟಹಾಸಕ್ಕೆ ಮತ್ತೊಂದು ಹಸು ಬಲಿಯಾಗಿದೆ. ಐಯ್ಯಮಾಡ ಗಣೇಶ್ ದೇವಯ್ಯ ಎಂಬವರಿಗೆ ಸೇರಿದ ಹಸು ಬಲಿಯಾಗಿದ್ದು, ಸರ್ಕಾರಿ ಶಾಲೆಯ ಸಮೀಪ ಘಟನೆ ನಡೆದಿದೆ. ಸಂಜೆಯ ವೇಳೆಯಲ್ಲಿ ಹಸು ಮನೆಗೆ ಬರಲಿಲ್ಲವಾದ ಕಾರಣ ಹುಡುಕಾಟ ನಡೆಸಿ ಹಸು ಕಾಣದೇ ಇದ್ದಾಗ ದಟ್ಟಾರಣ್ಯದಲ್ಲಿ ರೈತ ಸಂಘದ ಮುಖಂಡರುಗಳಾದ ಅಜ್ಜಮಾಡ ಚಂಗಪ್ಪ, ಐಯ್ಯಮಾಡ ಹ್ಯಾರಿ ಸೋಮೇಶ್ ತೆರಳಿ ಪರಿಶೀಲಿಸಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.