ಮಡಿಕೇರಿ, ಫೆ. 17: ಕೊಡಗಿನ ಮೂಲಕ ಕೇರಳಕ್ಕೆ ಹಾದುಹೋಗಲು ಉದ್ದೇಶಿಸಿರುವ ರೈಲು ಮಾರ್ಗ ಯೋಜನೆಗೆ ಕೊಡವ ಮಕ್ಕಡ ಕೂಟ ವಿರೋಧ ವ್ಯಕ್ತ ಪಡಿಸುತ್ತದೆಂದು ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ತಿಳಿಸಿದ್ದಾರೆ.

ರೈಲು ಯೋಜನೆಯಿಂದ ಕೊಡಗಿನ ಪರಿಸರದ ಮೇಲೆ ತೀವ್ರತರವಾದ ಧಕ್ಕೆಯಾಗಲಿರುವದರಿಂದ ಕೊಡಗಿನ ಜನತೆ ವೀರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ರೈಲು ಯೋಜನೆ ವಿರೋಧಿ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಕೂಟ ತಿಳಿಸಿದೆ.