ಕುಶಾಲನಗರ, ಫೆ. 16: ಕುಶಾಲನಗರದ ಶ್ರೀ ಮುತ್ತಪ್ಪ ಸೇವಾ ಟ್ರಸ್ಟ್ ಆಶ್ರಯದಲ್ಲಿ ತೆರೆ ಮಹೋತ್ಸವ ಭಕ್ತಿಭಾವದಿಂದ ಜರುಗಿತು. ಎರಡು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಮುತ್ತಪ್ಪ ವೆಳ್ಳಾಟಂ, ತಾಲಪೊಲಿ, ಸಿಡಿಮದ್ದು ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ತಿರುವಪ್ಪನ ತೆರೆ, ಅನ್ನದಾನ ಜರುಗಿದವು.
ದೈವದ ಪೂಜಾ ಕಾರ್ಯಕ್ರಮಗಳಲ್ಲಿ ನೆರೆಯ ಗ್ರಾಮಗಳು ಹಾಗೂ ಸ್ಥಳೀಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮುತ್ತಪ್ಪ ಸೇವಾ ಟ್ರಸ್ಟ್‍ನ ಟ್ರಸ್ಟಿಗಳಾದ ಕೆ. ವರದ, ಎಂ. ಹರೀಂದ್ರನ್, ಎ.ಕೆ. ಶೇಖರನ್, ವಿ. ಬಾಬಿ, ಕೆ.ಎಂ. ಹರೀಂದ್ರನ್, ಕೆ.ಕೆ. ದಿನೇಶ್ ಕುಮಾರ್, ಎಂ.ಡಿ. ರಂಜಿತ್ ಕುಮಾರ್ ಮತ್ತು ಆಡಳಿತ ಮಂಡಳಿ ಸದಸ್ಯರು ಇದ್ದರು.