ಬೆಂಗಳೂರು, ಫೆ. 16: ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ನೇತೃತ್ವದಲ್ಲಿ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು. ಕಾವೇರಿ ನಿವಾಸದಲ್ಲಿ ನಿಯೋಗದ ಜೊತೆ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಮುಂದಿನ ಬಜೆಟ್ ವೇಳೆ ತಾಲೂಕು ರಚನೆ ಸಂಬಂಧ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪದ್ಮಿನಿ ಪೊನ್ನಪ್ಪ ಮಾಹಿತಿ ನೀಡಿದ್ದಾರೆ.

ನಿಯೋಗದಲ್ಲಿ ಹೋರಾಟ ಸಮಿತಿ ಸಂಚಾಲಕರಾದ ಮೂಕಳೆರ ಕುಶಾಲಪ್ಪ, ಕಾಟಿಮಾಡ ಜಿಮ್ಮಿ, ಕಾರ್ಯದರ್ಶಿ ಎರುಮು ಹಾಜಿ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಕಿರಣ್, ವಕೀಲ ಮಾಚಿಮಂಡ ಸುರೇಶ್, ಕಾರ್ಯದರ್ಶಿ ಚೇಂದಿರ ಅಪ್ಪಚ್ಚು ಸೇರಿದಂತೆ ಹಲವರು ಭಾಗವಹಿಸಿದ್ದರು.