ಮಡಿಕೇರಿ, ಫೆ. 18: ಹೈದರಾಬಾದಿನಿಂದ ಪ್ರವಾಸಕ್ಕೆ ಬಂದ ಪ್ರವಾಸಿಗರ ಮೇಲೆ ದುಬಾರೆಯ ರ್ಯಾಫ್ಟಿಂಗ್ ತಂಡ ದೌರ್ಜನ್ಯ ನಡೆಸಿದ ಪರಿಣಾಮ ಪ್ರವಾಸಿಗನೋರ್ವ ಸಾವನ್ನಪ್ಪಿದ್ದು, ಕೊಲೆಗೆ ಕಾರಣ ವಾಗಿರುವ ಎಲ್ಲರನ್ನೂ ಬಂಧಿಸುವಂತೆ ಎಸ್‍ಡಿಪಿಐ ಜಿಲ್ಲಾ ಸಮಿತಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಕಳೆದ ಹಲವು ವರ್ಷಗಳಿಂದ ಇಲ್ಲಿನ ರ್ಯಾಫ್ಟಿಂಗ್ ತಂಡ ಪ್ರವಾಸಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಾ ಬಂದಿದೆ ಎಂದು ಆರೋಪಿಸಿರುವ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಮೃತ ಪ್ರವಾಸಿಗನ ಕುಟುಂಬಕ್ಕೆ ಸರಕಾರ ರೂ. 25 ಲಕ್ಷ ಪರಿಹಾರ ನೀಡಬೇಕು. ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಒದಗಿಸುವ ಸಲುವಾಗಿ ದುಬಾರೆಯಲ್ಲಿ ಪೊಲೀಸರನ್ನು ನೇಮಿಸುವದರ ಜೊತೆಗೆ ರ್ಯಾಪ್ಟಿಂಗ್ ಲೈಸಸ್ಸ್ಸನ್ನು ರದ್ದುಪಡಿಸಿ, ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟೆಂಡರ್ ಕರೆಯಲು ಜಿಲ್ಲಾಡಳಿತ ಮುಂದಾಗಬೇಕೆಂದ ಅವರು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ರೂಪಿಸುವದಾಗಿ ತಿಳಿಸಿದ್ದಾರೆ.