ಸಿದ್ದಾಪುರ, ಫೆ. 18: ಪ್ರದಾನಿ ನರೇಂದ್ರ ಮೋದಿ ಹೇಳಿಕೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಹಾಗೂ ಸಿದ್ದಾಪುರ ವಲಯ ಕಾಂಗ್ರೆಸ್ ವತಿಯಿಂದ ಸಿದ್ದಾಪುರ ಬಸ್ಸ್ ನಿಲ್ದಾಣದಲ್ಲಿ ಪಕೋಡ ತಯಾರಿಸಿ ಮಾರಾಟ ಮಾಡುವದರ ಮೂಲಕ ಪ್ರತಿಭಟಿಸಲಾಯಿತು.
ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪಕೋಡ ಸ್ಟಾಲ್ ರಚಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲೇ ಪಕೋಡ ತಯಾರಿಸಿದರು. ಈ ಸಂದರ್ಭ ನರೇಂದ್ರ ಮೋದಿಗೆ ದಿಕ್ಕಾರ ಕೂಗಿದ ಪ್ರತಿಭಟನಾಕಾರರು, 2 ಕೋಟಿ ಉದ್ಯೋಗ ಎಲ್ಲಿ ಎಂದು ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ ಸಲಾಂ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಪಿ.ಸಿ ಹಸೈನಾರ್ ಹಾಜಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ,ಯುವ ಕಾಂಗ್ರೆಸ್ ವೀರಾಜಪೇಟೆ ವಿಧಾನಸಭಾ ಅಧ್ಯಕ್ಷ ಜಮ್ಮಡ ಸೋಮಣ್ಣ , ಗ್ರಾ.ಪಂ. ಅಧ್ಯಕ್ಷ ಮಣಿ ಅವರುಗಳು ಮಾತನಾಡಿ, ಪ್ರಧಾನಿ ಮೋದಿ ಸುಳ್ಳು ಭರವಸೆಯೊಂದಿಗೆ ದೇಶದ ಯುವಕರಿಗೆ ಉದ್ಯೋಗ ಕಲ್ಪಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ದೇಶದ ಯುವಕರಿಗೆ ಮೋದಿಯವರ ಸಲಹೆಯ ಅಗತ್ಯವಿಲ್ಲ. ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ನೀಡಲು ಒತ್ತಾಯಿಸಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಬಸ್ಸ್‍ಗಳಲ್ಲಿ ಪಕೋಡ ಮಾರಾಟ ಮಾಡಿದರು. ಭಾನುವಾರ ಸಂತೆಯ ದಿನವಾದ ಕಾರಣ ಪಕೋಡ ಹೆಚ್ಚು ಮಾರಾಟವಾಯಿತು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉಸ್ಮಾನ್ ಹಾಜಿ, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಹೆಚ್ ಮೂಸ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹನೀಫ, ಕಾರ್ಯದರ್ಶಿ ಜಾನ್ಸನ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶರ್ಪೂದ್ಧಿನ್, ಲಾಲು, ಮುನೀರ್, ಮುಖಂಡರಾದ ಬಷೀರ್, ಯೂಸುಫ್, ಮಹಮ್ಮದ್ ಆಲಿ, ಗ್ರಾ.ಪಂ ಸದಸ್ಯರಾದ ಜಾಫರ್, ಮಂಜುನಾಥ್, ಪೂವಮ್ಮ, ದೇವಜಾನು, ಪ್ರೇಮ, ಕರ್ಪಯ್ಯ, ಸುಶೀಲ, ಸರೋಜ ಸೇರಿದಂತೆ ಮುಖಂಡರು. ಕಾರ್ಯಕರ್ತರು ಭಾಗವಹಿಸಿದ್ದರು.