ಆಲೂರುಸಿದ್ದಾಪುರ, ಫೆ. 18: ಅರೆಭಾಷೆ ಗೌಡ ಸಮಾಜದ ಸಂಸ್ಕøತಿ, ಆಚಾರ ವಿಚಾರ ಸಮಾಜದಲ್ಲಿರುವÀ ಇತರ ಸಮುದಾಯಕ್ಕೆ ಮಾದರಿಯಾಗಬೇಕು ಎಂದು ಶಾಸಕ ಕೊಂಬಾರನ ಜಿ.ಬೋಪಯ್ಯ ಅಭಿಪ್ರಾಯ ಪಟ್ಟರು. ಅವರು ಸಮೀಪದ ಸಂಗಯ್ಯನಪುರದಲ್ಲಿ ನೂತನವಾಗಿ ಸ್ಥಾಪಿಸಿರುವ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಹಿಂದಿನ ತಲೆಮಾರಿನ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಸಂಸ್ಕಾರವನ್ನು ಕರಗತ ಮಾಡಿಕೊಂಡು ಮುಂದಿನ ಪೀಳಿಗೆಯವರಿಗೆ ಉಳಿಸಿ ಬೆಳೆಸಿಕೊಳ್ಳಬೇಕು ಎಂದರು.ಕರ್ನಾಟಕ ರಾಜ್ಯ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಾಲ್ತಾಡ್ ಸಿ.ಜಯರಾಮ್ ಮಾತನಾಡಿ,ಅರೆಭಾಷೆ ಗೌಡ ಜನಾಂಗ ಮೂಲ ನಿವಾಸಿಗಳಾಗಿದ್ದು ಜನಾಂಗಕ್ಕೆ ಹಲವಾರು ವರ್ಷಗಳ ಹಿಂದಿನ ಇತಿಹಾಸ ಇದೆ. ವಿಶಿಷ್ಟ ಸಂಸ್ಕøತಿ ಆಚಾರಗಳಿಂದ ಕಾರ್ಯನಿರ್ವ ಹಿಸುತ್ತಿದೆ. ಈ ನಿಟ್ಟಿನಲ್ಲಿ ಅರೆಭಾಷೆ, ಸಾಹಿತ್ಯ ಸಂಸ್ಕøತಿಯನ್ನು ಕೇವಲ ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಗಳಿಗೆ ಸೀಮಿತಗೊಳಿಸದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಪರಿಚಯಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಅರೆಭಾಷೆ ಸಾಹಿತ್ಯ ಸಮ್ಮಿಲನಗಳನ್ನು ನಡೆಸಲು ಅಕಾಡೆಮಿ ನಿರ್ಣಯಿಸಿದೆ ಎಂದರು.

ಕುಶಾಲನಗರ ಡಿವೈಎಸ್‍ಪಿ ಪೆರಬಾಯಿ ಮುರುಳೀಧರ್ ಮಾತನಾಡಿ,

(ಮೊದಲ ಪುಟದಿಂದ)ಅರೆಭಾಷೆ ಜನಾಂಗದವರಲ್ಲಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ಎಎಸ್, ಐಪಿಎಸ್, ಕೆಎಎಸ್ ಮುಂತಾದ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಆಲೂರುಸಿದ್ದಾಪುರದ ಹಿರಿಯರಾದ ಕೋಳಿಬೈಲು ಬೋಜಪ್ಪ, ಬೈಮನ ರಾಘವಯ್ಯ , ಕೆದಂಬಾಡಿ ಈರಪ್ಪ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಬೆದ್ರಂಗಳ ಬಿ.ಭಾರತೀಶ್, ಮಡಿಕೇರಿ ನಗರಸಭೆ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಉಪಸ್ಥಿತರಿದ್ದರು. ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಜಿ.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್, ಪ್ರಮುಖರಾದ ಹೊಸೂರು ಶಿವಪ್ರಕಾಶ್, ಹೊಸೂರು ಸತೀಶ್‍ಕುಮಾರ್, ಆಲೂರುಸಿದ್ದಾಪುರ ಗೌಡ ಸಮಾಜದ ಕಾರ್ಯದರ್ಶಿ ಕುಯ್ಯುಮುಡಿ ಜಯಕುಮಾರ್ ಮುಂತಾದವರಿದ್ದರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸಂಗಯನಪುರ ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅರೆಭಾಷೆ ಗೌಡ ಜನಾಂಗದ ಮಹಿಳೆಯರು ಮತ್ತು ಪುರುಷರು ಸಂಪ್ರಾದಾಯಿಕ ಉಡುಗೆಯೊಂದಿಗೆ ಮತ್ತು ಮಹಿಳೆಯರು ಪೂರ್ಣಕುಂಭ ದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಅತಿಥಿಗಳನ್ನು ಕರೆತರಲಾಯಿತು. ಮಡಿಕೇರಿ ನೆಲ್ಲಕ್ಕಿ ತಂಡದವರಿಂದ ಅರೆಭಾಷೆ ಜನಾಂಗದ ಕುರಿತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.