ಮಡಿಕೇರಿ, ಫೆ. 18: ಕರ್ನಾಟಕ ಮತ್ತು ಗೋವಾ ಎನ್‍ಸಿಸಿ ಡೈರೆಕ್ಟೋರೇಟ್‍ನಿಂದ ಅಸಾಧಾರಣ ಸಾಧನೆ ತೋರಿದ ಎನ್‍ಸಿಸಿ ಕೆಡೆಟ್‍ಗಳಿಗೆ ನೀಡಲಾಗುವ ರಾಜ್ಯಮಟ್ಟದ ಪ್ರಶಸ್ತಿಗೆ ಎ.ಜಿ. ಐಶ್ವರ್ಯ ಭಾಜನಳಾಗಿದ್ದಾಳೆ.
ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸೀನಿಯರ್ ಅಂಡರ್ ಆಫೀಸರ್ ಆಗಿರುವ ಐಶ್ವರ್ಯಗೆ ಡಿಡಿಜಿ ಕಮಾಂಡೇಶನ್ ಪ್ರಶಸ್ತಿಯನ್ನು ಬೆಂಗಳೂರಿನ ಎಂ.ಎನ್.ಆರ್.ಕೆ.ವಿ. ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಎನ್‍ಸಿಸಿ ಡೈರೆಕ್ಟರ್ ಬ್ರಿಗೆಡಿಯರ್ ಡಿ.ಎಂ. ಪೂರ್ವಿನಾಥ್ ಪ್ರದಾನ ಮಾಡಿದರು. ಈಕೆ ಮಡಿಕೇರಿ ಪೆನ್ಷನ್‍ಲೇನ್ ನಿವಾಸಿ ಅಜ್ಜಿನಂಡ ಗಣೇಶ್ ಹಾಗೂ ಮೋಂತಿ ಗಣೇಶ್ ಅವರ ಪುತ್ರಿ.