ಶಾಸಕ ಜಿಗ್ನೇಶ್ ಮೇವಾನಿ ಬಂಧನ ಅಹಮದಾಬಾದ್, ಫೆ. 18: ಗುಜರಾತ್‍ನ ವಡ್ಗಾಂ ಕ್ಷೇತ್ರದ ಶಾಸಕ ಹಾಗೂ ದಲಿತ ಮುಖಂಡ ಜಿಗ್ನೇಶ್ ಮೇವಾನಿ ಅವರನ್ನು ಅಹಮದಾಬಾದ್ ಪೆÇಲೀಸರು ಭಾನುವಾರ ಬಂಧಿಸಿದ್ದಾರೆ. ಶುಕ್ರವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಲಿತ ಹೋರಾಟಗಾರ ಭಾನು ವಂಕರ್ ಅವರ ಬೇಡಿಕೆಗಳನ್ನು ಬೆಂಬಲಿಸಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾರಂಗಪುರ ಪ್ರದೇಶಕ್ಕೆ ತೆರಳುತ್ತಿದ್ದಾಗ ಜಿಗ್ನೇಶ್ ಅವರನ್ನು ಬಂಧಿಸಲಾಗಿದೆ. ನಲಪಾಡ್ ಹ್ಯಾರಿಸ್ ಧಾಳಿ: ಐವರ ವಶ ಬೆಂಗಳೂರು, ಫೆ. 18: ವ್ಯಕ್ತಿಯೊಬ್ಬರ ಮೇಲೆ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹ್ಯಾರಿಸ್ ಧಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೆÇಲೀಸರು 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಅನ್ವಯ ಬೆಂಗಳೂರಿನ ಕಬ್ಬನ್ ಪಾರ್ಕ್ ಪೆÇಲೀಸರು ಒಟ್ಟು ಐದು ಮಂದಿ ಆರೋಪಿಗಳನ್ನು ವಶಕೆ ಪಡೆದಿದ್ದು, ಬಂಧಿತರನ್ನು ಬಾಲಕೃಷ್ಣ, ಮಂಜುನಾಥ್, ಅಭಿಷೇಕ್, ಅರುಣ್ ಎಂದು ಗುರುತಿಸಲಾಗಿದೆ. ಅಂತೆಯೇ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೆÇಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಏತನ್ಮಧ್ಯೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿರುವಂತೆ ಬಿಜೆಪಿ ಮತ್ತು ಆಪ್ ಕಾರ್ಯಕರ್ತರು ಆಗ್ರಹಿಸುತ್ತಿದ್ದು, ಹಲ್ಲೆಗೊಳಗಾದ ವಿದ್ವತ್ ದಾಖಲಾಗಿರುವ ಮಲ್ಯಾ ಆಸ್ಪತ್ರೆ, ಪ್ರಕರಣ ದಾಖಲಾಗಿರುವ ಕಬ್ಬನ್ ಪಾರ್ಕ್ ಪೆÇಲೀಸ್ ಠಾಣೆ ಮತ್ತು ಶಾಸಕ ಎನ್.ಎ. ಹ್ಯಾರಿಸ್ ಅವರ ನಿವಾಸದ ಮುಂದೆ ಕಾರ್ಯಕರ್ತರು ಪ್ರತಿಭಟನೆ ಮುಂದವರೆಸಿದ್ದಾರೆ.

ಪತ್ನಿ-ಮಕ್ಕಳನ್ನು ಕೊಂದು ಸಾವಿಗೆ ಶರಣು

ಮುಂಬೈ, ಫೆ. 18: ಉದ್ಯಮಿಯೊಬ್ಬರು ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ವಿಷ ಉಣಿಸಿ ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 38 ವರ್ಷದ ನಿಲೇಶ್ ಚೌಧರಿ ಆತ್ಮಹತ್ಯೆಗೆ ಶರಣಾದ ಉದ್ಯಮಿ. ಪತ್ನಿ 33 ವರ್ಷದ ನೀಲಂ, ಮಕ್ಕಳಾದ 9 ವರ್ಷದ ಶ್ರಾವಣಿ ಮತ್ತು 7 ವರ್ಷದ ಶ್ರೇಯಾ ಮೃತ ದುರ್ದೈವಿಗಳು ಎಂದು ಉತ್ತಂ ನಗರ ಪೆÇಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹೇಮಂತ್ ಭಟ್ ತಿಳಿಸಿದ್ದಾರೆ. ನಿಲೇಶ್ ಚೌಧರಿ ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿದ್ದು ಪತ್ರದಲ್ಲಿ ತಾನು ಆರ್ಥಿಕ ತೊಂದರೆಗಳಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನಿಲೇಶ್ ಚೌಧರಿ ಪ್ಲಾಸ್ಟಿಕ್ ರಿಮೋಲ್ಡಿಂಗ್ ಬಿಸಿನೆಸ್ ನಡೆಸುತ್ತಿದ್ದರು. ನಿಲೇಶ್ ಚೌಧರಿ ಮೃತದೇಹ ಫ್ಲಾಟ್‍ನಲ್ಲಿ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ ಪತ್ನಿ ಮತ್ತು ಮಕ್ಕಳ ಮೃತದೇಹ ಹಾಸಿಗೆ ಮೇಲೆ ಪತ್ತೆಯಾಗಿದೆ ಎಂದು ಭಟ್ ಹೇಳಿದ್ದಾರೆ

ಕುತೂಹಲ ಮೂಡಿಸಿದ ರಜಿನಿ-ಕಮಲ್ ಭೇಟಿ

ಚೆನ್ನೈ, ಫೆ. 18: ನಟ ಕಮಲ್ ಹಾಸನ್ ಹಣ ಅಥವಾ ಹೆಸರಿಗಾಗಿ ರಾಜಕೀಯಕ್ಕೆ ಬಂದಿಲ್ಲ. ಪ್ರಾಮಾಣಿಕವಾಗಿ ಜನರಿಗೆ ಸೇವೆ ಮಾಡಲು ಬಯಸುತ್ತಿದ್ದಾರೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. ಭಾನುವಾರ ನಟ ಕಮಲ್ ಹಾಸನ್ ಅವರು ನಟ ರಜನಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿ ಸುಮಾರು 1 ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದರು. ಚೆನ್ನೈನ ಪೆÇೀಯಸ್ ಗಾರ್ಡನ್ ನಿವಾಸಕ್ಕೆ ಇಂದು ಆಗಮಿಸಿದ್ದ ನಟ ಕಮಲ್ ಹಾಸನ್ ಅವರು, ಚರ್ಚೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ರಜನಿಕಾಂತ್ ಕಮಲ್ ಹಾಸನ್ ಹಣ, ಹೆಸರು ಗಳಿಸಲು ರಾಜಕೀಯಕ್ಕೆ ಬಂದಿಲ್ಲ. ಪ್ರಾಮಾಣಿಕವಾಗಿ ಅವರು ಜನಸೇವೆ ಮಾಡಬೇಕು ಎಂದು ಬಯಸಿದ್ದಾರೆ. ಅವರ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ನಟ ಕಮಲ್ ಹಾಸನ್ ರಾಜಕೀಯ ವಿಚಾರದ ಕುರಿತು ಮಾತನಾಡಲು ನಿರಾಕರಿಸಿದರು. ಅಂತೆಯೇ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್, ಕಾಲವೇ ಇದಕ್ಕೆ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.

ಮಲೇಷ್ಯಾದಲ್ಲಿ ಶೋರೂಂ ಆರಂಭಿಸಿದ ನೀರವ್ ಮೋದಿ

ನವದೆಹಲಿ, ಫೆ. 18: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ವಂಚನೆ ಪ್ರಕರಣ ಸಂಬಂಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ ಅತ್ತ ಮಲೇಷ್ಯಾದಲ್ಲಿ ಮತ್ತೆರಡು ಶೋರೂಂಗಳನ್ನು ತೆರಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ವಂಚನೆ ಪ್ರಕರಣ ಸಂಬಂಧ ಸಿಬಿಐನಿಂದ ಲುಕ್ ಔಟ್ ನೋಟಿಸ್ ಪಡೆದಿರುವ ನೀರವ್ ಮೋದಿ ಮಕಾವ್ ಮತ್ತು ಕೌಲಾಲಂಪುರದಲ್ಲಿ ಎರಡು ಆಭರಣ ಶೋರೂಂಗಳನ್ನು ತೆರೆದಿದ್ದಾರೆ. ಇನ್ನು ಈ ಶೋರೂಂಗಳಿಗೆ ಹೂಡಿಕೆ ಮಾಡಿರುವ ಬಂಡವಾಳ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ಪ್ರಕರಣದಲ್ಲಿ ಪಡೆದ ಹಣವೇ ಅಥವಾ ಬೇರೆ ಆದಾಯದ ಮೂಲದ್ದೇ ಎಂಬ ಹಲವು ಪ್ರಶ್ನೆಗಳು ಉದ್ಭವವಾಗುತ್ತಿದ್ದು, ಈ ಬಗ್ಗೆಯೂ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇನ್ನು ಪ್ರಸ್ತುತ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ನಿನ್ನೆಯಷ್ಟೇ ಸಿಬಿಐ ಅಧಿಕಾರಿಗಳು ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲಿಸಿದ್ದರು.

ವಿಮಾನ ಅಪಘಾತದಲ್ಲಿ 66 ಸಾವು

ಟೆಹರಾನ್, ಫೆ. 18: ಇರಾನ್‍ನಲ್ಲಿ ಭಾನುವಾರ ಭೀಕರ ವಿಮಾನ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 66 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇರಾನ್‍ನ ಆಸ್ಮಾನ್ ಏರ್‍ಲೈನ್ಸ್ ಸಂಸ್ಥೆಯ ಎಟಿಆರ್ ವಿಮಾನ ಝಾಗ್ರೋಸ್ ಗುಡ್ಡಗಾಡು ಪ್ರದೇಶದಲ್ಲಿ ಪತನಕ್ಕೀಡಾಗಿದ್ದು, ವಿಮಾನದಲ್ಲಿದ್ದ ಸಿಬ್ಬಂದಿಗಳೂ ಸೇರಿದಂತೆ ಎಲ್ಲ 66 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತಕ್ಕೀಡಾದ ವಿಮಾನ ರಾಜಧಾನಿ ಟೆಹ್ರಾನ್‍ನಿಂದ ಇಸ್ಫಹಾನ್ ಪ್ರಾಂತ್ಯದಲ್ಲಿನ ಯಸುಜ್ ಪಟ್ಟಣಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ನೈಋತ್ಯ ಇರಾನ್ ನಲ್ಲಿರುವ ಝಾಗ್ರೋಸ್ ಗುಡ್ಡಗಾಡು ಪ್ರದೇಶದ ಮೇಲೆ ತೆರಳುತ್ತಿದ್ದಾಗ ವಿಮಾನ ಪತನವಾಗಿದ್ದು, ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಹೆಲಿ ಆಂಬುಲೆನ್ಸ್ ಹೆಲಿಕಾಪ್ಟರ್‍ಗಳ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸ್ಥಳೀಯ ಬುಡಕಟ್ಟು ಸಮುದಾಯದ ಜನರು ತೆರವು ಕಾರ್ಯಾಚರಣೆಯಲ್ಲಿ ಸಿಬ್ಬಂದಿಗೆ ನೆರವು ನೀಡುತ್ತಿದ್ದಾರೆ.

ತಾಜ್ ಕಣ್ತುಂಬಿಕೊಂಡ ಕೆನಡಾ ಪ್ರಧಾನಿ

ಆಗ್ರಾ, ಫೆ. 18: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯೂ ಕುಟುಂಬ ಇಂದು ಆಗ್ರಾಕ್ಕೆ ಭೇಟಿ ನೀಡಿ, ಪ್ರೇಮಸೌಧ ತಾಜ್ ಮಹಲ್ ಸೌಂದರ್ಯವನ್ನು ಕಣ್ತುಂಬಿಕೊಂಡಿತು. 46 ವರ್ಷದ ಜಸ್ಟಿನ್ ಟ್ರುಡ್ಯೂ ತನ್ನ ಪತ್ನಿ, ಮೂವರು ಮಕ್ಕಳು ಹಾಗೂ ಸಂಪುಟ ಸಚಿವರ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದು, ತಾಜ್ ಮಹಲ್ ವೀಕ್ಷಿಸಿ ಅಲ್ಲಿನ ಸೌಂದರ್ಯ ಸವಿದರು. ಪ್ರವಾಸದ ವೇಳೆಯಲ್ಲಿ ಉದ್ಯೋಗ ಸೃಷ್ಟಿ ಹಾಗೂ ಉಭಯ ದೇಶಗಳ ಜನರ ನಡುವಿನ ಸಂಬಂಧ ಬಲಗೊಳಿಸಲಾಗುವದು ಎಂದು ಟ್ರುಡ್ಯೂ ಹೇಳಿದ್ದಾರೆ. ನಾಳೆ ಪ್ರಧಾನಿ ನರೇಂದ್ರಮೋದಿ ಅವರ ತವರು ಜಿಲ್ಲೆ ಗುಜರಾತಿಗೆ ಟ್ರುಡ್ಯೂ ಭೇಟಿ ನೀಡಲಿದ್ದು, ಸಬರಮತಿ ಆಶ್ರಮದಲ್ಲಿನ ಮಹಾತ್ಮಗಾಂಧಿ ಸ್ಮಾರಕ ವೀಕ್ಷಿಸಲಿದ್ದಾರೆ. ಬಳಿಕ ಅಕ್ಷರಧಾಮ ದೇವಾಲಯಕ್ಕೂ ಟ್ರುಡ್ಯೂ ಭೇಟಿ ನೀಡಲಿದ್ದಾರೆ.