ಶ್ರೀಮಂಗಲ, ಫೆ. 18: ರಾಜ್ಯದ ಏಕೈಕ ಮೃತ್ಯುಂಜಯ ದೇವಸ್ಥಾನ ಎಂಬ ಪ್ರಸಿದ್ಧಿಯ ದಕ್ಷಿಣ ಕೊಡಗಿನ ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ತಾ. 25 ರಿಂದ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಗಳು ಆರಂಭವಾಗಲಿದ್ದು, ಮಾರ್ಚ್ 7 ರಂದು ವಾರ್ಷಿಕ ಉತ್ಸವ ನಡೆಯಲಿದೆ. ತಾ. 25 ರಂದು ರಾತ್ರಿ 8 ಗಂಟೆಗೆ ಕೊಡಿಮರ ನಿಲ್ಲಿಸುವದು, ತಾ. 26ರಂದು ಪೂರ್ವಾಹ್ನ 11 ಗಂಟೆಗೆ ನಿತ್ಯ ಪೂಜೆ ಸಂಜೆ 7 ಗಂಟೆಗೆ ತೂಚಂಬಲಿ. ತಾ. 27 ಕ್ಕೆ ಪ್ರಾತಃಕಾಲ 5 ಗಂಟೆಗೆ ಉತ್ಸವಮೂರ್ತಿ ದರ್ಶನ, ಪೂರ್ವಾಹ್ನ 11 ಗಂಟೆಗೆ ನಿತ್ಯ ಪೂಜೆ, ಸಂಜೆ 7 ಗಂಟೆಗೆ ತೂಚಂಬಲಿ. ತಾ. 28ಕ್ಕೆ ಪ್ರಾತಃಕಾಲ 5 ಗಂಟೆಗೆ ಉತ್ಸವಮೂರ್ತಿ ದರ್ಶನ 10 ಗಂಟೆಗೆ ಭಂಡಾರ ಬರುವದು, 11 ಗಂಟೆಯಿಂದ ನಿತ್ಯ ಪೂಜೆ, ಸಂಜೆ 7ಗಂಟೆಗೆ ತೂಚಂಬಲಿ. ಮಾ. 1 ರಿಂದ 3ರವರೆಗೆ ಪ್ರಾತಃಕಾಲ 5 ಗಂಟೆಗೆ ಇರುಬೊಳಕು, ಪೂರ್ವಾಹ್ನ 11 ಗಂಟೆಯಿಂದ ನಿತ್ಯಪೂಜೆ, ಸಂಜೆ 7 ಗಂಟೆಗೆ ತೂಚಂಬಲಿ. ತಾ 4ಕ್ಕೆ ಪ್ರಾತಃಕಾಲ 5 ಗಂಟೆಗೆ ಇರುಬೊಳಕು, ಪೂರ್ವಾಹ್ನ 11 ಗಂಟೆಗೆ ನಿತ್ಯ ಪೂಜೆ, ಹರಕೆ ಬೊಳಕು, ತುಲಾಭಾರ, ಸಂಜೆ 7 ಗಂಟೆಗೆ ತೂಚಂಬಲಿ, ಉತ್ಸವ ಮೂರ್ತಿ ದರ್ಶನ. ತಾ. 6 ಪ್ರಾತಃಕಾಲ 5ಕ್ಕೆ ಇರಬೊಳಕು, ಹರಕೆ ಬೊಳಕಿನ ಪ್ರಸಾದ ವಿತರಣೆ, ಪೂರ್ವಾಹ್ನ 11 ಗಂಟೆಯಿಂದ ನಿತ್ಯ ಪೂಜೆ, ಹರಕೆ ಬೊಳಕು, ತುಲಭಾರ, ಸಂಜೆ 7 ಗಂಟೆಗೆ ತೂಚಂಬಲಿ, ಉತ್ಸವ ಮೂರ್ತಿ ದರ್ಶನ. ತಾ. 6ಕ್ಕೆ ಪ್ರಾತಃಕಾಲ 5 ಗಂಟೆಗೆ ಇರುಬೊಳಕು, ಹರಕೆ ಬಳಕಿನ ಪ್ರಸಾದ ವಿತರಣೆ, ಪೂರ್ವಾಹ್ನ 11 ಗಂಟೆಯಿಂದ ನಿತ್ಯ ಪೂಜೆ, ಮಧ್ಯಾಹ್ನ 12 ಗಂಟೆಗೆ ತುಲಾಭಾರ, ಸಂಜೆ 5 ಗಂಟೆಗೆ ನೆರಪು, ರಾತ್ರಿ 8ಕ್ಕೆ ಶ್ರೀ ವಿಷ್ಣು ದೇವರ ಅಲಂಕಾರ ಪೂಜೆ. ತಾ. 7ಕ್ಕೆ ಪೂರ್ವಾಹ್ನ 10 ಗಂಟೆಯಿಂದ ನಿತ್ಯ ಪೂಜೆ, ಮಧ್ಯಾಹ್ನ 12 ಗಂಟೆಗೆ ತುಲಾಭಾರ, ಮಧ್ಯಾಹ್ನ 3 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಸಂಜೆ 5 ಗಂಟೆಗೆ ಉತ್ಸವ ಮೂರ್ತಿ ದರ್ಶನ, ಅವಭೃತ ಸ್ನಾನ, ರಾತ್ರಿ ಉತ್ಸವ ಮೂರ್ತಿ ದರ್ಶನ ನಂತರ ವಸಂತ ಪೂಜೆ. ತಾ. 8ಕ್ಕೆ ಪೂರ್ವಾಹ್ನ 10-30ಕ್ಕೆ ಕೊಡಿಮರ ಇಳಿಸುವ ಮೂಲಕ ವಾರ್ಷಿಕ ಉತ್ಸವಕ್ಕೆ ತೆರೆ ಬೀಳಲಿದೆ. ನಂತರ ಎಂದಿನಂತೆ ಪೂರ್ವಾಹ್ನ 11 ಗಂಟೆಯಿಂದ ನಿತ್ಯ ಪೂಜೆ ವರ್ಷದ ಎಲ್ಲಾ ದಿನ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.