ವೀರಾಜಪೇಟೆ, ಫೆ. 18: ವೀರಾಜಪೇಟೆ ಪಟ್ಟಣ ಪಂಚಾಯಿತಿ
ತಾ. 19 ರಂದು (ಇಂದು) ಹಮ್ಮಿಕೊಂಡಿರುವ 35 ಅಂಗಡಿ ಮಳೆಗೆಗಳ ಹರಾಜು ತಡೆಯಾಜ್ಞೆಯ ವಿವಾದಕ್ಕೆ ಇಲ್ಲಿನ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡಲಿದೆ.
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬಾಡಿಗೆದಾರರು ಕೋರಿರುವ ತಡೆಯಾಜ್ಞೆಗೆ ವಕೀಲರ ವಕಾಲತು ಮೂಲಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಕೆಲವು ತಿಂಗಳ ಹಿಂದೆ ಕಚೇರಿಗೆ ಬಂದ ಉಚ್ಚನ್ಯಾಯಾಲಯದ ಆದೇಶದ ಪ್ರತಿಗೆ ಸರಕಾರದ ಆದೇಶವನ್ನು ಸೇರಿಸಿ ಕಳುಹಿಸಿರುವ ಸುತ್ತೋಲೆ ಯನ್ನು ಎಲ್ಲ ಪಟ್ಟಣ ಪಂಚಾಯಿತಿ ಗಳಿಗೆ ಕಳಿಸಿರುವ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯಲ್ಲಿ ಸೇರಿಸಲಾಗಿದೆ.
ನ್ಯಾಯಾಧೀಶರ ಆದೇಶದಂತೆ ಮುಖ್ಯಾಧಿಕಾರಿ ತಾ. 19ರಂದು (ಇಂದು) 11ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಿ ಮಳಿಗೆಗಳ ಹರಾಜು ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಿರುವ ದಾಗಿ ಗೊತ್ತಾಗಿದೆ. ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಂದು ಪುರಭವನದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.