ಮಡಿಕೇರಿ, ಫೆ. 18: ಮೈಸೂರಿನಲ್ಲಿ ಮಾ. 7 ರಂದು ಬಿ.ಜೆ.ಪಿ. ಮಹಿಳಾ ಸಮಾವೇಶ ಹಿನ್ನೆಲೆ ಕೊಡಗು ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚಾ ಸಭೆ ನಡೆಯಿತು.
ಸಭೆಯಲ್ಲಿ ರಾಜ್ಯ ಬಿ.ಜೆ.ಪಿ. ಮಹಿಳಾ ಮೋರ್ಚಾ ಕಾರ್ಯದರ್ಶಿ ಲತಾ ಉಪಸ್ಥಿತರಿದ್ದು, ಕೊಡಗು ಜಿಲ್ಲೆಯಿಂದ ಮೈಸೂರಿನ ಸಮಾವೇಶಕ್ಕೆ ಸುಮಾರು 10,000 ಕಾರ್ಯಕರ್ತರು ಆಗಮಿಸುವಂತೆ ಸಿದ್ಧತೆ ಕೈಗೊಳ್ಳುವಂತೆ ಹೇಳಿದರು. ಬೂತ್ ಮಟ್ಟದಿಂದಲೇ ಕಾರ್ಯಕರ್ತರನ್ನು ಸಂಘಟಿಸಿ ಸಮಾವೇಶಕ್ಕೆ ತೆರಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಡಲ ಅಧ್ಯಕ್ಷರುಗಳಾದ ನಳಿನಿ ಗಣೇಶ್, ಅನಿತಾ ಪೂವಯ್ಯ, ಕವಿತಾ ಬೆಳ್ಯಪ್ಪ, ಪ್ರಮುಖರಾದ ಸುಮಾ ಸುದೀಪ್, ಪಟ್ರಂಗಡ ಗೀತಾ ಇನ್ನಿತರರು ಇದ್ದರು.