ಮೂರ್ನಾಡು, ಫೆ. 19: ಇಲ್ಲಿಗೆ ಸಮೀಪದ ಹಾಕತ್ತೂರು ಗ್ರಾ. ಪಂ.ಯಲ್ಲಿ ಗ್ರಾ.ಪಂ. ನಿಧಿಯಿಂದ ಗ್ಯಾಸ್ ವಿತರಣೆ ಮಾಡಲಾಯಿತು. ಗ್ರಾ.ಪಂ.ಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಗ್ರಾ. ಪಂ. ನಿಧಿಯ ಶೇ. 25 ಮೀಸಲಾತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 22 ಫಲಾನುಭವಿಗಳಿಗೆ ಹಾಗೂ ಶೇ. 3 ರ ಮೀಸಲಾತಿಯಲ್ಲಿ 5 ಫಲಾನುಭವಿ ಗಳಿಗೆ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್‍ಗಳನ್ನು ಗ್ರಾ. ಪಂ.ಯ ಅಧ್ಯಕ್ಷೆ ಮಂದ್ರೀರ ಶಾರದ ವಿತರಿಸಿದರು.

ಈ ಸಂದರ್ಭ ಗ್ರಾ. ಪಂ.ಅಭಿವೃದ್ಧಿ ಅಧಿಕಾರಿ ಸಬಾಸ್ಟಿನ್ ಪೆರೇರಾ, ಪಂ. ಉಪಾಧ್ಯಕ್ಷ ವಿಷ್ಣು ಕುಮಾರ್, ಸದಸ್ಯರಾದ ಪಿ.ಈ. ದೇವಿಪ್ರಸಾದ್, ಸರೋಜ, ಪಿಯೂಸ್ ಪೆರೇರಾ, ಸವಿತ, ಪೂವಮ್ಮ ಮತ್ತು ಹೇಮಾವತಿ ಹಾಜರಿದ್ದರು.