ವೀರಾಜಪೇಟೆ, ಫೆ. 19: ಕಟ್ಟಡ ಕಾರ್ಮಿಕರ ಬದುಕಿಗೆ ಸುರಕ್ಷತೆ ಕಲ್ಪಿಸು ವಲ್ಲಿ ಸರಕಾರಗಳು ವಿಫಲವಾಗಿದೆ. ಎಂದು ಸಿ.ಐ.ಟಿ.ಯು. ರಾಜ್ಯ ಉಪಾಧ್ಯಕ್ಷ ಕೆ. ಪ್ರಕಾಶ್ ಹೇಳಿದ್ದಾರೆ. ವೀರಾಜಪೇಟೆ ಗೌಡ ಸಮಾಜ ಸಭಾಂಗಣದಲ್ಲಿ ಕಟ್ಟಡ ಕಾರ್ಮಿಕ ಸಂಘಗಳ ಕಾರ್ಯಕರ್ತರ ಎರಡು ದಿನಗಳ ರಾಜ್ಯ ಮಟ್ಟದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ದರು.

ಸ್ಥಳೀಯ ಸಂಸ್ಥೆಗಳ ಆಡಳಿತ ಗಾರರು ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಾನೂನಿಗೆ ವಿರುದ್ಧ ವಾಗಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುತ್ತಿರುವದರಿಂದ ಕಟ್ಟಡ ಕುಸಿತದಂತಹ ಅನಾಹುತ ಗಳು ಹೆಚ್ಚಾಗುತ್ತಿದೆ. ಕಟ್ಟಡ ಕಾರ್ಮಿಕರಿಗೆ ತಮಗೆ ದೊರಕುವ ಸೌಲಭ್ಯಗಳ ಮತ್ತು ಸಂಘÀಟನೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಐ.ಆರ್.ಪ್ರಮೋದ್, ಸಿ.ಐ.ಟಿ.ಯು. ಜಿಲ್ಲಾ ಕಾರ್ಯದರ್ಶಿ ರಮೇಶ್, ಸಿ.ಡಬ್ಲ್ಯೂ.ಎಫ್.ಐ. ಅಖಿಲ ಭಾರತ ಕಾರ್ಯದರ್ಶಿ ಬಿ. ಉಮೇಶ್ ಮಾತನಾಡಿದರು. ಸಿ.ಐ.ಟಿ.ಯು. ರಾಜ್ಯಾಧ್ಯಕ್ಷ ಎನ್.ವೀರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಸಿ. ಪಿ. ಐ. ಎಂ. ಜಿಲ್ಲಾ ಕಾರ್ಯದರ್ಶಿ ಡಾ|| ಐ. ಆರ್. ದುರ್ಗಾ ಪ್ರಸಾದ್ ಜಿಲ್ಲಾ ಜನರಲ್ ವರ್ಕರ್ರ್ಸ್ ಯೂನಿಯನ್ ಅಧ್ಯಕ್ಷ ಮಹಾದೇವ, ಸಿ.ಐ.ಟಿ.ಯು.ಜಿಲ್ಲಾ ಉಪಾಧ್ಯಕ್ಷ ಎನ್.ಡಿ.ಕುಟ್ಟಪ್ಪನ್ ಹಾಗೂ ಬಿಸಿಯೂಟ ಕಾರ್ಮಿಕರ ಸಂಘದ ಕುಸುಮ ವೇದಿಕೆಯಲ್ಲಿ ದ್ದರು. ಜಿಲ್ಲಾ ಕಾರ್ಯದರ್ಶಿ ಎ.ಸಿ.ಸಾಬು ಸ್ವಾಗತಿಸಿ ರಾಜ್ಯ ಕಾರ್ಯದರ್ಶಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತರಬೇತಿ ಶಿಬಿರವು ಇಂದು ಮುಕ್ತಾಯ ಗೊಳ್ಳಲಿದೆ. ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.