ಮಡಿಕೇರಿ : ಹೆಬ್ಬೆಟ್ಟಗೇರಿಯ ವಿಸ್ಮಯ ಯುವಕ ಸಂಘದ ವತಿಯಿಂದ ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಪ್ರಥಮ ವರ್ಷದ ಗ್ರಾಮೀಣ ಕ್ರೀಡಾಕೂಟ ನಡೆಯಿತು.ಹೆಬ್ಬೆಟ್ಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗುಂಡುಎಸೆತ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವದು, ತೆಂಗಿನ ಕಾಯಿಗೆ ಕಲ್ಲು ಎಸೆಯುವದು, 40 ವರ್ಷ ಮೇಲ್ಪಟ್ಟವರಿಗೆ ಅಂಗಿ ಬಿಚ್ಚುತ್ತಾ ಓಡುವದು, ವಿಕೆಟ್‍ಗೆ ರಿಂಗ್ ಹಾಕುವದು, ಹಗ್ಗಜಗ್ಗಾಟ, ಸಂಗೀತ ಕುರ್ಚಿ, ನಿಂಬೆ ಚಮಚ ಓಟ, ಮಕ್ಕಳಿಗೆ ಕಾಳು ಹೆಕ್ಕುವದು ಸೇರುವದು ಸೇರಿದಂತೆ ಹಲವು ಕ್ರೀಡಾ ಪೈಪೋಟಿ ಜರುಗಿತು. ಗ್ರಾಮ ವ್ಯಾಪ್ತಿಯ ಸಾರ್ವಜನಿಕರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಚಾಲನೆ : ಕ್ರೀಡಾಕೂಟಕ್ಕೆ ನಮೋ ಗ್ರೂಪ್‍ನ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಮಿನಾಜ್ ಪ್ರವೀಣ್ ಚಾಲನೆ ನೀಡಿದರು.