ಮಡಿಕೇರಿ, ಫೆ.19 : ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಆಳ್ವಾಸ್ ನುಡಿಸಿರಿಯ ಕೊಡಗು ಘಟಕದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ತಾ. 24 ರಂದು ಗೋಣಿಕೊಪ್ಪದಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಆಳ್ವಾಸ್ ಸಾಂಸ್ಕøತಿಕ ವೈಭವ-2018 ಅನ್ನು ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ಕಾರ್ಯಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಗೋಣಿಕೊಪ್ಪದ ಜಿಎಂಪಿ ಶಾಲಾ ಮೈದಾನದಲ್ಲಿ ಸಂಜೆ 6 ಗಂಟೆಯಿಂದ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.ಸಾಂಸ್ಕøತಿಕ ವೈಭವದಲ್ಲಿ ಕೇರಳದ ಶಾಸ್ತ್ರೀಯ ನೃತ್ಯ ಮೋಹಿನಿಯಟ್ಟಂ, ಶ್ರೀ ರಾಮ ಪಟ್ಟಾಭಿಷೇಕ ಹೆಸರಿನ ಬಡಗುತಿಟ್ಟು ಯಕ್ಷಪ್ರಯೋಗ, ಒರಿಸ್ಸಾದ ಜನಪದ ನೃತ್ಯ ಗೋಟಿಪೂವ, ಶ್ರೀಲಂಕಾದ ಸಮೂಹ ನೃತ್ಯ ಕ್ಯಾಂಬಿಯನ್, ಆಂಧ್ರದ ಬಂಜಾರ, ಮಣಿಪುರದ ಸ್ಟಿಕ್ ನೃತ್ಯ, ಭೂಶಂಭು ಭರತನಾಟ್ಯ, ಸಾಹಸಮಯ ಮಲ್ಲಕಂಬ, ಗುಜರಾತಿನ ದಾಂಡೀಯ ನೃತ್ಯ, ಪಶ್ಚಿಮ ಬಂಗಾಳದ ಸಿಂಹ ಭೇಟೆ ಪುರುಳಿಯೋ, ಕಥಕ್ ಪ್ರಹಾರ್, ಮಹಾರಾಷ್ಟ್ರದ ಲಾವಣಿ ನೃತ್ಯ, ತೆಂಕುತಿಟ್ಟು ಯಕ್ಷಗಾನ ಅಗ್ರಪೂಜೆ, ಶ್ರೀಲಂಕಾದ ಜನಪದ ನೃತ್ಯ ಸೇರಿದಂತೆ ವಂದೇ ಮಾತರಂ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಕೊಡಗಿನ ಸಾಂಪ್ರದಾಯಿಕ ನೃತ್ಯ ಉಮ್ಮತ್ತಾಟ್ ಮತ್ತು ಸ್ವಾಗತ ನೃತ್ಯ ನಡೆಯಲಿದೆ.

ಸುಮಾರು ಮೂರು ಗಂಟೆಗಳ ಕಾಲ ವಿಜೃಂಭಿಸಲಿರುವ ಅಂತಾ ರ್ರಾಷ್ಟ್ರೀಯ ಗುಣಮಟ್ಟದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಕಲಾಭಿಮಾನಿಗಳಿಗೆ ಇದೊಂದು ಸದವಕಾಶವಾಗಿದೆ ಎಂದು ಕೇಶವ ಕಾಮತ್ ಹೇಳಿದರು.

(ಮೊದಲ ಪುಟದಿಂದ) ಸಭಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಆಳ್ವಾಸ್ ನುಡಿಸಿರಿ ಕೊಡಗು ಘಟಕವನ್ನು ಮತ್ತು ಅಂತಾರ್ರಾಷ್ಟ್ರೀಯ ಸಾಂಸ್ಕøತಿಕ ವೈಭವವನ್ನು ಉದ್ಘಾಟಿಸಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ, ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕೆÀ್ಷ ಸೆಲ್ವಿ, ಜಿಲ್ಲಾ ಪಂಚಾಯತ್ ಸದಸ್ಯ ಸಿ.ಕೆ. ಬೋಪಣ್ಣ, ತಾಲೂಕು ಪಂಚಾಯಿತಿ ಸದಸ್ಯರಾದ ಜಯ ಪೂವಯ್ಯ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ನುಡಿಸಿರಿ ಕೊಡಗು ಘಟಕದ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ ವಹಿಸಲಿದ್ದಾರೆ. ಆಳ್ವಾಸ್ ನುಡಿಸಿರಿ ಕೊಡಗು ಘಟಕದ ಗೌರವಾಧ್ಯಕ್ಷ ಡಾ. ಕೆ.ಕೆ.ಶಿವಪ್ಪ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕೇಶವ ಕಾಮತ್ ಹೇಳಿದರು.

ಪ್ರಧಾನ ಸಂಚಾಲಕ ಕೆ.ಆರ್.ಬಾಲಕೃಷ್ಣ ರೈ ಮಾತನಾಡಿ, ಕೊಡಗು ಜಿಲ್ಲೆಯ ಸಾಂಸ್ಕøತಿಕ ಲೋಕದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ ಅಂತಾರ್ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 350 ವಿದ್ಯಾರ್ಥಿಗಳು ಸಾಂಸ್ಕøತಿಕ ವೈಭವವನ್ನು ಸಾದರಪಡಿಸಲ್ಲಿದ್ದಾರೆ ಎಂದರು.

ಕನ್ನಡ ನಾಡಿನ ಸಾಂಸ್ಕøತಿಕ ಹಿರಿಮೆಯನ್ನು ಪಸರಿಸುವಲ್ಲಿ ನುಡಿ ಸೇವಾ ನಿರತ ಆಳ್ವಾಸ್ ನುಡಿಸಿರಿಯ ಭಾಗವಾದ ಕೊಡಗು ಘಟಕ ಈ ಸಾಂಸ್ಕøತಿಕ ಜಾತ್ರೆಯನ್ನು ವ್ಯವಸ್ಥಿತವಾಗಿ ಸಂಘಟಿಸುತ್ತಿದೆ. ಕಾರ್ಯಕ್ರಮಕ್ಕಾಗಿ ಗೋಣಿಕೊಪ್ಪಲಿನ ಜಿ.ಎಂಪಿ. ಶಾಲಾ ಮೈದಾನದಲ್ಲಿ 80*40 ಅಡಿ ಅಳತೆಯ ಬೃಹತ್ ವೇದಿಕೆಯನ್ನು ಸಿದ್ದಪಡಿಸಲಾಗುತ್ತಿದೆ. 6 ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಸಾಂಸ್ಕøತಿಕ ವೈಭವದ ಯಶಸ್ವಿಯ ಪೂರಕ ಸಿದ್ದತೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಆಯೋಜಿಸಿರುವ ಈ ಸಾಂಸ್ಕøತಿಕ ಜಾತ್ರೆಗೆ 5 ಸಾವಿರ ಪ್ರೇಕ್ಷಕರನ್ನು ನಿರೀಕ್ಷಿಸಲಾಗಿದೆ ಎಂದು ಬಾಲಕೃಷ್ಣ ರೈ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಘಟಕದ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ, ಕಾರ್ಯದರ್ಶಿ ಬಿ.ಎನ್.ಪ್ರಕಾಶ್ ಹಾಗೂ ಪ್ರಚಾರ ಸಮಿತಿ

ಸಂಚಾಲಕ ರಫೀಕ್ ತೂಚಮಕೇರಿ ಉಪಸ್ಥಿತರಿದ್ದರು.