ಮಡಿಕೇರಿ, ಫೆ. 19: ಕಡಿಯತ್ತೂರು ಗ್ರಾಮದ ಶ್ರೀ ಈಶ್ವರ, ಭಗವತಿ ಶಾಸ್ತಾವು, ಗುಳಿಗ ಮತ್ತು ಶ್ರೀ ಚಾಮುಂಡಿ ಮೇಲೇರಿ ವಾರ್ಷಿಕ ಉತ್ಸವ ತಾ.20ರಿಂದ (ಇಂದಿನಿಂದ) ತಾ. 22ರವರೆಗೆ ನಡೆಯಲಿದೆ. ತಾ. 20ರ ಬೆಳಿಗ್ಗೆ 10 ಗಂಟೆಯಿಂದ ಎತ್ತು ಪೋರಾಟ, ಸಂಜೆ ದೇವರ ಮುಡಿ ಉತ್ಸವ, 21ರಂದು ಸಂಜೆಯಿಂದ ವಿವಿಧ ಕೋಲಗಳು ಹಾಗೂ ತಾ. 22ರಿಂದ ಶ್ರೀ ಚಾಮುಂಡಿ, ಗುಳಿಗ ದೇವರ ಉತ್ಸವ, ಮಧ್ಯಾಹ್ನ 12 ಗಂಟೆಯಿಂದ ಮೇಲೇರಿ ಉತ್ಸವ ನಡೆಯಲಿದೆ.