ಮಡಿಕೇರಿ, ಫೆ. 19 : ಅಪಘಾತಕ್ಕೆ ಒಳಗಾದ ವ್ಯಕ್ತಿಗಳನ್ನು ರಕ್ಷಣೆ ಮಾಡಿ ಹಾಗೆಯೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಎಂದು ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ತಿಳಿಸಿದರು.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಸೆಂಟ್ ಜಾನ್ಸ್ ಆಂಬುಲೆನ್ಸ್ ಸಂಸ್ಥೆ ಇವರ ಸಹಯೋಗದಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ‘ಅಪಘಾತ ಜೀವ ರಕ್ಷಕ’ ಯೋಜನೆಯಡಿ ಕಾರ್ಮಿಕ ಇಲಾಖೆಯ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ ಖಾಸಗಿ ವಾಣಿಜ್ಯ ವಾಹನ ಚಾಲಕರ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಪಘಾತಕ್ಕೊಳಗಾದ ವ್ಯಕ್ತಿಯನ್ನು ರಕ್ಷಣೆ ಮಾಡುವದರಿಂದ ರಕ್ಷಣೆ ಮಾಡಿದ ವ್ಯಕ್ತಿಗಳಿಗೆ ಯಾವದೇ ರೀತಿಯ ತೊಂದರೆಯಾಗುವದಿಲ್ಲ. ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗೆ ಸಾಕ್ಷಿಗಾಗಿ ಅಲೆಯುವಂತಿಲ.್ಲ್ಲ ನಿಶ್ಚಿಂತೆಯಿಂದ ಇರಬಹುದು ಹಿಂದೆ ಇದರ ಬಗ್ಗೆ ತಿಳುವಳಿಕೆ ಇರಲಿಲ್ಲ ಹಾಗೆಯೇ ಯಾವದೇ ತರಬೇತಿಯು ಇರಲಿಲ್ಲ ಆದರೆ ಇಂದು ತರಬೇತಿ ಇದೆ ಇದನ್ನು ಸದುಪಯೋಗಪಡಿಸಿ ಕೊಳ್ಳಿ ಎಂದು ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಮಾತನಾಡಿ ಜನರಿಗೆ ಪ್ರಥಮ ಚಿಕಿತ್ಸೆ ಎಂದರೆ ಏನು ಎಂಬದೇ ಕೆಲವರಿಗೆ ಗೊತ್ತಿಲ್ಲ ಇದನ್ನು ಪ್ರತಿಯೊಬ್ಬ ಚಾಲಕನು ತಿಳಿದು ಕೊಳ್ಳಬೇಕು ಪ್ರಾಣ ಹೋಗುತ್ತಿರುವ ಜೀವವನ್ನು ಉಳಿಸಿ, ಮನುಷ್ಯನಿಗೆ ಅಧಿಕಾರ ಮುಖ್ಯವಲ್ಲ ಮನಷ್ಯತ್ವ ಬಹಳ ಮುಖ್ಯ ಮೊದಲು ಮನುಷ್ಯರಾಗಿ.

ಲೈಸನ್ಸ್ ಪಡೆಯಲು ಇನ್ನು ಮುಂದೆ ಕಡ್ಡಾಯವಾಗಿ ಕನಿಷ್ಟ 8ನೇ ತರಗತಿ ಪಾಸಾಗಿರಬೇಕು ಲೈಸನ್ಸ್‍ಗೋಸ್ಕರ ಬಿಕ್ಷೆ ಬೇಡಬೇಡಿ ನಿಮಗೆ ಮೊದಲು ಜ್ಞಾನದ ಅರಿವು ಮುಖ್ಯ ಎಂದರು.

ಸೆಂಟ್ ಜಾನ್ ಆಂಬುಲೆನ್ಸ್ ಸಂಸ್ಥೆಯ ವೈಧ್ಯಾಧಿಕಾರಿ ಡಾ.ನರಸಿಂಹ, ಕಾರ್ಮಿಕ ಇಲಾಖೆ ಅಧಿಕಾರಿ ರಾಮಕೃಷ್ಣ, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಆರ್.ಶೀರಾಜ್ ಅಹ್ಮದ್ ಇತರರು ಇದ್ದರು.