ಮೈಸೂರಿನಲ್ಲಿ ವಿಶ್ವದರ್ಜೆಯ ರೈಲು ನಿಲ್ದಾಣ
ಮೈಸೂರು, ಫೆ.19 : ಮೈಸೂರಿನಲ್ಲಿ ವಿಶ್ವದರ್ಜೆಯ ರೈಲು ನಿಲ್ದಾಣ ನಿರ್ಮಾಣ ಮಾಡಲಾಗುವದು ಮತ್ತು ಸುಮಾರು 70 ಹೆಚ್ಚು ಅತ್ಯಾಧುನಿಕ ರೈಲು ಇಲ್ಲಿಗೆ ಆಗಮಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.ಮೈಸೂರಿನ ಮಹಾರಾಜ ಕಾಲೇಜ್ ಮೈದಾನದಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಹಿಂದಿನ ಸರ್ಕಾರಗಳು ಜನರ ಕಣ್ಣಿಗೆ ಮಣ್ಣೆರಚಿವೆ. ಹಿಂದೆ ಇಷ್ಟೊಂದು ಮೀಡಿಯಾ, ಎನ್ ಆರ್ ಐ ಮೊದಲಾದವು ಇರಲಿಲ್ಲ. ಅವರನ್ನು ಹೇಳುವವರು, ಕೇಳುವವರು ಇರಲಿಲ್ಲ. ರೈಲ್ವೆ ಬಜೆಟ್ ನಲ್ಲಿ ಘೋಷಣೆಯಾಗಿದ್ದ 9 ಲಕ್ಷ ರುಪಾಯಿಗಿಂತ ಹೆಚ್ಚು ಮೌಲ್ಯದ 1500 ಯೋಜನೆಗಳು ಜಾರಿಯೇ ಆಗಿರಲಿಲ್ಲ. ಹಾಗಾಗಿಯೇ ಪ್ರತ್ಯೇಕ ರೈಲ್ವೆ ಬಜೆಟ್ ರದ್ದು ಮಾಡಿ, ಆಗ ಘೋಷಣೆಯಾಗಿದ್ದ ರೈಲ್ವೆ ಯೋಜನೆಗಳನ್ನು ಹುಡುಕಿ ಈಗ ಜಾರಿಗೊಳಿಸುತ್ತಿದ್ದೇವೆ ಎಂದರು. ಬೆಂಗಳೂರು-ಮೈಸೂರು ರೈಲ್ವೆ ವಿದ್ಯುದ್ದೀಕರಣ, ಮೈಸೂರು-ಉದಯಪುರ ಮೈಸೂರು ಕ್ವೀನ್ ರೈಲು ಲೋಕಾರ್ಪಣೆ ಮಾಡಿದ್ದೇವೆ. ರೈಲ್ವೆ ಆಧುನೀಕರಣ, ರೈಲ್ವೆ ಪ್ರಗತಿಯ ತೀವ್ರಗತಿಗೆ ಆದ್ಯತೆ ನೀಡಿದ್ದೇವೆ. ರೈಲ್ವೆ ಲೈನ್ ಡಬ್ಬಲ್ಲಿಂಗ್ ಅದರ ಒಂದು ಭಾಗ. ಬಡವರ ಅಭ್ಯುದಯಕ್ಕೆ ರೈಲ್ವೆ ಪ್ರಗತಿ ಅಗತ್ಯ. ನಾಲ್ಕು ವರ್ಷದಿಂದ ರೈಲ್ವೆ ಯೋಜನೆಗಳು ತೀವ್ರಗತಿ ಪಡೆದುಕೊಂಡಿದೆ ಎಂದು ಪ್ರಧಾನಿ ಹೇಳಿದರು.
ವಿದ್ಯುತ್ ರೈಲು ಮಾರ್ಗಕ್ಕೆ ಚಾಲನೆ
ಮೈಸೂರು, ಫೆ.19 : ಮೈಸೂರು-ಬೆಂಗಳೂರು ವಿದ್ಯುತ್ ರೈಲು ಮಾರ್ಗ ಹಾಗೂ ಮೈಸೂರು-ರಾಜಸ್ತಾನದ ಉದಯಪುರ ನಡುವಣ ಪ್ಯಾಲೆಸ್ ಕ್ವೀನ್ ಹಮ್ ಸಫರ್ ನೂತನ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಶ್ರವಣಬೆಳಗೊಳದಿಂದ ಮೈಸೂರಿಗೆ ಆಗಮಿಸಿದ ಪ್ರಧಾನಿ, ಮೈಸೂರಿನ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಾಜುಭಾಯಿ ವಾಲಾ, ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು
ಅಯೋಧ್ಯಾ ವಿವಾದ : ಮೂವರ ವಿರೋಧ
ಉತ್ತರ ಪ್ರದೇಶ, ಫೆ.19 : ಬಾಬ್ರಿ ಮಸೀದಿ, ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹೊರಗಡೆ ಇತ್ಯಥ್ರ್ಯವನ್ನು ಒಪ್ಪುವದಿಲ್ಲ ಎಂದು ಮುಸ್ಲಿ ಸಮುದಾಯದ ಮೂವರು ಪ್ರತಿವಾದಿಗಳು ಹೇಳಿದ್ದಾರೆ. ಪ್ರತಿವಾದಿಗಳಾದ ಹಜಿ ಮೆಹಬೂಬಾ, ಇಕ್ಬಲ್ ಅನ್ಸಾರಿ, ಮತ್ತು ಮೊಹಮ್ಮದ್ ಉಮರ್ ಅವರು ಆಯೋಧ್ಯೆಯಲ್ಲಿಂದು ಮುಸ್ಲಿಂ ಸಮುದಾಯದವರೊಂದಿಗೆ ಸಭೆ ನಡೆಸಿ, ಮಸೀದಿಯನ್ನು ಬೇರೊಂದು ನಿವೇಶನಕ್ಕೆ ಸ್ಥಳಾಂತರ ಮಾಡುವದಿಲ್ಲ ಅಥವಾ ಯಾವದೇ ಪಕ್ಷಕ್ಕೂ ಕೊಡುಗೆಯಾಗಿ ನೀಡುವದಿಲ್ಲ ಎಂಬ ನಿರ್ಣಯವನ್ನು ಮಂಡಿಸಿದರು ಎಂಬ ಮಾಹಿತಿ ತಿಳಿದುಬಂದಿದೆ.ಮುಸ್ಲಿಂ ಸಮುದಾಯ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಮಾತ್ರ ವಿಶ್ವಾಸ ಇಟ್ಟಿದ್ದು, ನ್ಯಾಯಾಲಯದ ಹೊರಗಡೆ ವಿವಾದ ಇತ್ಯರ್ಥಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಾರೇಲ್ವಿ, ಡಿಯೋಬಾಂಡಿ ಮತ್ತು ಸಿಯಾ ಮುಸ್ಲಿಂ ಸಮುದಾಯ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ನಿರ್ಣಯಕ್ಕೆ ಸಹಿ ಹಾಕಿರುವ ಮೂವರು ಪ್ರತಿವಾದಿಗಳು ತಿಳಿಸಿದ್ದಾರೆ.
ನಲಪಾಡ್ ಫೆ.21ರ ವರೆಗೆ ಪೆÇಲೀಸರ ವಶಕ್ಕೆ
ಬೆಂಗಳೂರು, ಫೆ.19 : ಯುವಕ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಸೇರಿದಂತೆ 7 ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಫೆ.21ರ ವರೆಗೆ ಪೆÇಲೀಸರ ವಶಕ್ಕೆ ನೀಡಿದೆ. ಕಳೆದ ಶನಿವಾರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಮೊಹಮ್ಮದ್ ನಲಪಾಡ್ ಇಂದು ಬೆಳಗ್ಗೆ ಕಬ್ಬನ್ ಪಾರ್ಕ್ ಪೆÇಲೀಸ್ ಠಾಣೆಯಲ್ಲಿ ಪೆÇಲೀಸರಿಗೆ ಶರಣಾಗಿದ್ದ. ಆರೋಪಿಯನ್ನು ವಶಕ್ಕೆ ಪಡೆದ ಪೆÇಲೀಸರು ನಗರದ 8ನೇ ಎಸಿಎಂಎಂ ಕೋರ್ಟ್‍ಗೆ ಹಾಜರುಪಡಿಸಿದರು. ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ಮತ್ತು ಸ್ಥಳ ಪರಿಶೀಲನೆಯ ಅಗತ್ಯವಿದೆ. ಆದ್ದರಿಂದ, ಎಲ್ಲಾ ಆರೋಪಿಗಳನ್ನು 10 ದಿನ ನಮ್ಮ ವಶಕ್ಕೆ ನೀಡಬೇಕು ಎಂದು ಪೆÇಲೀಸರು ಕೋರ್ಟ್‍ಗೆ ಮನವಿ ಮಾಡಿದ್ದರು. ಆದರೆ 10 ದಿನ ಪೆÇಲೀಸ್ ವಶಕ್ಕೆ ನೀಡಲು ನಿರಾಕರಿಸಿದ ಕೋರ್ಟ್, ಕೇವಲ ಎರಡು ದಿನ ಮಾತ್ರ ಪೆÇಲೀಸರ ವಶಕ್ಕೆ ನೀಡಿ ಆದೇಶಿಸಿದೆ.
ಶಿವಾಜಿ ಜಯಂತಿ : ಗಾಳಿಯಲ್ಲಿ ಗುಂಡು
ಧಾರವಾಡ, ಫೆ.19 : ಶಿವಾಜಿ ಜಯಂತಿ ಅಂಗವಾಗಿ ಸೋಮವಾರ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಕಾಂಗ್ರೆಸ್ ನಾಮ ನಿರ್ದೇಶಿತ ಪಾಲಿಕೆ ಸದಸ್ಯ ಮಂಜುನಾಥ ಕದಂ ಅವರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದರು.ಇಲ್ಲಿನ ಶಿವಾಜಿ ವೃತ್ತದಲ್ಲಿರುವ ಪ್ರತಿಮೆಗೆ ಬೃಹತ್ ಮಾಲೆ ಅರ್ಪಿಸಿದ ನಂತರ ಹಿಂದೆ ಇದ್ದ ಸಹಾಯಕರೊಬ್ಬರು ಪಿಸ್ತೂಲು ನೀಡಿದರು. ಕದಂ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದರು. ಶಿವಾಜಿ ಮಹಾರಾಜ್ ಕಿ ಜೈ ಎಂಬ ಜಯಘೋಷ ಮೊಳಗಿತು.ಶರಹರ ಠಾಣಾ ವ್ಯಾಪ್ತಿಯಲ್ಲಿ ಇದು ನಡೆದಿದ್ದು, ಈವರೆಗೂ ಯಾವದೇ ಪ್ರಕರಣ ದಾಖಲಾಗಿಲ್ಲ.
ಪತ್ರಕರ್ತನ ತಾಯಿ, ಮಗಳ ಹತ್ಯೆ
ನಾಗ್ಪುರ, ಫೆ.19 : ಇಲ್ಲಿನ ಸ್ಥಳೀಯ ಪತ್ರಕರ್ತನ ತಾಯಿ ಹಾಗೂ ಒಂದು ವರ್ಷದ ಮಗಳನ್ನು ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಪೆÇಲೀಸರು ಬಂಧಿಸಿದ್ದಾರೆ.‘ಪತ್ರಕರ್ತ ರವಿಕಾಂತ್ ಕಾಂಬ್ಳೆ ಅವರು ತಾಯಿ ಉಷಾ ಕಾಂಬ್ಳೆ (52), ಮಗಳು ರಿಷಿ (1) ಇಬ್ಬರು ಭಾನುವಾರ ಸಂಜೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಆದರೆ, ಸೋಮವಾರ ಬೆಳಿಗ್ಗೆ 10.30ಕ್ಕೆ ಬಹದುರಾದ ನುಲ್ಲಾಹ ಪ್ರದೇಶದಲ್ಲಿ ಇವರ ಮೃತದೇಹಗಳು ಪತ್ತೆಯಾಗಿವೆ’ ಎಂದು ಪೆÇಲೀಸರು ತಿಳಿಸಿದ್ದಾರೆ.ಉಷಾ ಕಾಂಬ್ಳೆ ಅವರು ಹಣಕಾಸು ವ್ಯವಹಾರ ನಡೆಸುತ್ತಿದರು ಎಂದು ಪೆÇಲೀಸ್ ಆಯುಕ್ತ ನಿಲೇಶ್ ಭರ್ನೆ ತಿಳಿಸಿದ್ದಾರೆ.‘ಉಷಾ ಅವರು ಮೊಮ್ಮಗಳು ರಿಷಿಯೊಂದಿಗೆ ಭಾನುವಾರ ಸಂಜೆ 5.30ಕ್ಕೆ ಮನೆ ಸಮೀಪದ ಆಭರಣ ಅಂಗಡಿಗೆ ಹೋಗಿದ್ದರು. ಬಳಿಕ ಅವರು ಮನೆಗೆ ಹಿಂತಿರುಗಲಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ರಾತ್ರಿ 10ಕ್ಕೆ ರವಿಕಾಂತ್ ಅವರು ಪೆÇಲೀಸರಿಗೆ ದೂರು ನೀಡಿದ್ದಾರೆ’ ಎಂದು ಭರ್ನೆ ತಿಳಿಸಿದ್ದಾರೆ. ಪ್ರಕರಣ ಸಂಬಂಧ ರಾಮಬರನ್ ಶಾಹು(26) ಎಂಬಾತನನ್ನು ಪೆÇಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯಗೆ ಗಣ್ಯರ ನಮನ
ಪಾಂಡವಪುರ, ಫೆ.19 : ಸದನದ ಒಳಗೆ, ಹೊರಗೆ ರೈತರ ಪರವಾದ ಗಟ್ಟಿ ಧ್ವನಿಯಾಗಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಾವು ಅನಿರೀಕ್ಷಿತವಾದುದು. ಜೀವನವಿಡೀ ಹೋರಾಟದಲ್ಲೇ ಮುಂದುವರಿದ ಅವರು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಾಂಡವಪುರ ತಾಲೂಕು, ಕ್ಯಾತನಹಳ್ಳಿ ಗ್ರಾಮದ ಕ್ರೀಡಾಂಗಣದಲ್ಲಿ ಸೋಮವಾರ ಕೆ.ಎಸ್.ಪುಟ್ಟಣ್ಣಯ್ಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಪೆÇ್ರ.ಎಂ.ಡಿ.ನಂಜುಂಡಸ್ವಾಮಿ ಅವರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ನಾವೆಲ್ಲರೂ ರೈತಪರ ಹೋರಾಟದಲ್ಲಿ ಪಾಲ್ಗೊಂಡೆವು. ನಾವು ಹೋರಾಟ ಬಿಟ್ಟು ರಾಜಕಾರಣಕ್ಕೆ ಬಂದೆವು. ಆದರೆ ಪುಟ್ಟಣ್ಣಯ್ಯ ಹೋರಾಟ ಮುಂದುವರಿಸಿ ರೈತರ ಪರವಾಗಿ ನಿಂತರು. ರೈತರ ಪ್ರತಿನಿಧಿಯಾಗಿ ರಾಜಕಾರಣಕ್ಕೂ ಬಂದರು. ಬದ್ಧತೆಯಿಂದ ಹಲವು ಚಳವಳಿ ನಡೆಸಿರುವ ಅವರ ಸಾವು ಇಡೀ ರಾಜ್ಯಕ್ಕೆ ತುಂಬಲಾಗದ ನಷ್ಟ. ನಾಡಿಗೆ ಇಂಥವರು ಅತ್ಯಗತ್ಯ. ಅವರ ಅಗಲಿಕೆಯಿಂದ ವೈಯಕ್ತಿಕವಾಗಿಯೂ ನನಗೆ ನೋವಾಗಿದೆ ಎಂದು ಹೇಳಿದರು.