ಸಿದ್ದಾಪುರ, ಫೆ. 19: ತನ್ನ ತಾಯಿ ಕಾಣೆಯಾಗಿರುವದಾಗಿ ಮಗ ಸುಂಠಿಕೊಪ್ಪ ಠಾಣೆಗೆ ದೂರು ನೀಡಿದ್ದು, ವ್ಯಕ್ತಿ ನಾಪತ್ತೆ ಪ್ರಕರಣದಡಿ ಸುಂಟಿಕೊಪ್ಪ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅತ್ತೂರು ನಲ್ಲೂರು ಗ್ರಾಮದ ನಿವಾಸಿ ಪಾರ್ವತಿ (55) ಕಾಣೆಯಾಗಿರುವದಾಗಿ ಮಗ ಸುರೇಶ ಠಾಣೆಗೆ ದೂರು ನೀಡಿದ್ದಾರೆ. ತಾನು ತನ್ನ ತಾಯಿಯೊಂದಿಗೆ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಲೈನ್ ಮನೆಯಲ್ಲಿ ವಾಸವಿದ್ದು, ತಾ. 2ರಂದು ಕೆಲಸಕ್ಕೆ ಹೋಗಿದ್ದ ಸಂದರ್ಭ ತಾಯಿಯು ಮನೆಯಿಂದ ಹೊರ ಹೋಗಿದ್ದು, ಎಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಪಾರ್ವತಿ ಬಿಳಿ ಸೀರೆ, ನೀಲಿ ರವಿಕೆ ಧರಿಸಿರುವದಾಗಿ ದೂರಿನಲ್ಲಿ ತಿಳಿಸಿದ್ದಾರೆ.