ವೀರಾಜಪೇಟೆ, ಫೆ. 19: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷರಾಗಿ ಪಿ.ಎ. ಹನೀಫ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಂ. ಇಸ್ಮಾಯಿಲ್ ಆಯ್ಕೆಯಾಗಿದ್ದಾರೆ.

ಕಾರ್ಯಾಧ್ಯಕ್ಷರಾಗಿ ಪಿ.ಎ. ಕರೀಮ್, ಗೌರವ ಅಧ್ಯಕ್ಷರಾಗಿ ಜಿಲ್ಲಾ ವಕ್ಫ್ ಬೋರ್ಡ್‍ನ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್, ಉಪಾಧ್ಯಕ್ಷರಾಗಿ ಆರ್.ಕೆ. ಅಬ್ದುಲ್ ಸಲಾಂ, ಕೋಶಾಧಿಕಾರಿಯಾಗಿ ಹೆಚ್.ಎ. ಹಂಸ, ಕೊಟ್ಟಮುಡಿಯ ಎಂ.ವೈ. ಆಲಿ, ಸಹ ಕಾರ್ಯದರ್ಶಿಯಾಗಿ ಎಂ.ಎಂ. ಸಾದಿಕ್ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಎಂ.ಎ. ಮನ್ಸೂರ್ ಆಲಿ, ವೈ.ಎಂ. ಹಂಸ, ಎ.ಎಂ. ಅಬ್ದುಲ್ಲಾ, ಸಿ.ಇ. ಮುಸ್ತಾಫ, ಎಂ.ಎ. ಇಸ್ಮಾಯಿಲ್, ಸಿ.ಎ. ರಾಶಿಕ್, ಕೆ.ಎಸ್. ಸೂಫಿ, ಕೆ.ಹೆಚ್. ಫೈಸಲ್ ಹಾಗೂ ಕೆ.ಎಸ್. ರಫೀಕ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಏಪ್ರಿಲ್ ತಿಂಗಳ ಮೊದಲನೇ ವಾರದಲ್ಲಿ ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾಟವನ್ನು ಹಮ್ಮಿಕೊಳ್ಳುವಂತೆ ಸಭೆ ತೀರ್ಮಾನಿಸಿತು.