ವೀರಾಜಪೇಟೆ, ಫೆ. 19: ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್, ತಾವಳಗೇರಿ ಮೂಂದ್‍ನಾಡ್ ಟಿ ಶೆಟ್ಟಿಗೇರಿ ಹಾಗೂ ಅಖಿಲ ಕೊಡವ ಸಮಾಜದ ಸಹಯೋಗದಲ್ಲಿ ಮಾ. 8 ರಂದು ಮಹಿಳಾ ದಿನಾಚರಣೆ ಹಾಗೂ ಹರದಾಸ ಅಪ್ಪಚ್ಚ ಕವಿ ಜನ್ಮೋತ್ಸವವನ್ನು ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಆಯೋಜಿಸ ಲಾಗಿದೆ ಎಂದು ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆ ಬಾಚಿರಣಿಯಂಡ ರಾಣು ಅಪ್ಪಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿ ಆದಿಕವಿ, ವರಕವಿ ಇತ್ಯಾದಿ ಬಿರುದುಗಳನ್ನು ಪಡೆದುಕೊಂಡಿರುವ ಅಪ್ಪಚ್ಚ ಕವಿಯ ಪೂರ್ವ ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆ ರಾಣು ಅಪ್ಪಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಅಡ್ಡಂಡ ಕಾರ್ಯಪ್ಪ, ಡಾ. ಕಾಳಿಮಾಡ ಶಿವಪ್ಪ, ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೊಟ್ರಮಾಡ ಅರುಣ್ ಅಪ್ಪಣ್ಣ, ಸಂಭ್ರಮ ಮಹಿಳಾ ಸಾಂಸ್ಕøತಿಕ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ಅಶ್ವಿನಿ ಸತೀಶ್, ಉಳುವಂಗಡ ಕಮಲ ಉಪಸ್ಥಿತರಿರು ವರು ಎಂದು ಹೇಳಿದರು. ಗೋಷ್ಠಿಯಲ್ಲಿ ಮಳವಂಡ ಪೂವಿ ಮುತ್ತಪ್ಪ, ಕಾರ್ಯದರ್ಶಿ ಮಂಡೇಪಂಡ ಗೀತಾ ಮಂದಣ್ಣ, ನಿರ್ದೇಶಕರಾದ ಕೇಚೇಟಿರ ಕಾಮಣಿ ಪೂಣಚ್ಚ, ಮನ್ನೆರ ಸರು ರಮೇಶ್ ಉಪಸ್ಥಿತರಿದ್ದರು.