ಕೂಡಿಗೆ, ಫೆ. 19: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪಂಚಾಯತಿಯಲ್ಲಿನ ಗ್ರಾಮ ಪುರಸ್ಕಾರದ ರೂ. 5 ಲಕ್ಷ ಹಣ ವನ್ನು ವಿನಿಯೋಗಿಸಿ ಪಂಚಾಯಿತಿ ವ್ಯಾಪ್ತಿಯ ಹಳೆಗೋಟೆ ಮತ್ತು ಹುಲುಸೆ ಗ್ರಾಮಗಳಲ್ಲಿ ಶಾಲೆಯ ಸುತ್ತಲು ತಡೆಗೋಡೆ ನಿರ್ಮಿಸಲು ಸಭೆಯಲ್ಲಿ ಸದಸ್ಯರು ಒಕ್ಕೊರಲಿ ನಿಂದ ತೀರ್ಮಾನಿಸಿದರು.

ಮುಂದಿನ ದಿನಗಳಲ್ಲಿ ವಾರ್ಡು ಗಳಲ್ಲಿನ ಸಮಸ್ಯೆ, ನಡೆಯಬೇಕಾದ ಕಾಮಗಾರಿಗಳು ಹಾಗೂ ಹರಾಜು ಪ್ರಕ್ರಿಯೆಗಳ ಬಗ್ಗೆ ಚರ್ಚಿಸಲಾಯಿತು. ನಂತರ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲು ಕ್ರಿಯಾಯೋಜನೆಯನ್ನು ತಯಾರಿಸ ಲಾಯಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲತಾ ಮಾತನಾಡಿ, ಸಭೆಗಳಲ್ಲಿ ಸದಸ್ಯರೊಂದಿಗೆ ವಿವಿಧ ಕಾಮಗಾರಿಗಳ ಬಗ್ಗೆ ಚರ್ಚಿಸಿ, ಅವುಗಳನ್ನು ಹಂತಹಂತವಾಗಿ ಕೈಗೊಳ್ಳಲಾಗವದು. ಅಲ್ಲದೆ, ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಕುಡಿಯುವ ನೀರಿನ ಬಗ್ಗೆ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಆಧ್ಯತೆ ನೀಡ ಲಾಗುವದು ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಸರ್ಕಾರದ ಸುತ್ತೋಲೆಗಳನ್ನು ಸಭೆಗೆ ಮಂಡಿಸಿ, ಕಾಮಗಾರಿ ನಡೆಸುವ ವಿವರ ಹಾಗೂ ಸಮುದಾಯ ಶೌಚಾಲಯ ವನ್ನು ನಿರ್ಮಾಣ ಮಾಡುವದರ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪಂಚಾಯಿತಿ ಸದಸ್ಯರು ಇದ್ದರು.