ನಾಪೆÉÇೀಕ್ಲು, ಫೆ. 19: ತಮ್ಮ ತೋಟಗಳಲ್ಲಿ ಕಾಫಿ ಮತ್ತು ಅಂತರ್ ಬೆಳೆ ಕಾಳುಮೆಣಸು ಉತ್ತಮ ಫಸಲನ್ನು ಪಡೆಯಲು ತಜ್ಞ ವಿಜ್ಞಾನಿಗಳ ಸಲಹೆಯನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಬೆಳೆಗಾರರಿಗೆ ಮುರುಳೀಧರ್ ಸಲಹೆ ನೀಡಿದರು.

ತೋಟಗಾರಿಕೆ ಇಲಾಖೆ, ಕೊಡಗು ಜಿಲ್ಲಾ ಪಂಚಾಯಿತಿ, ಕೊಡವ ಸಮಾಜ ನಾಪೆÇೀಕ್ಲು, ನಾಲ್ಕುನಾಡು ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮಡಿಕೇರಿ ಇವರ ಸಹಯೋಗದೊಂದಿಗೆ ನಾಪೆÇೀಕ್ಲು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾಳುಮೆಣಸು ಬೇಸಾಯದ ಬಗ್ಗೆ ನಡೆದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೆಳೆಗಾರ ಇಂದು ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಕಂಗಾಲಾಗಿದ್ದು, ತೋಟದ ನಿರ್ವಹಣೆಗೆ ಕಷ್ಟಪಡುತ್ತ್ತಿದ್ದಾನೆ. ಬೆಳೆಗಾರರಿಗೆ ಸರಕಾರದ ಪ್ರೋತ್ಸಾಹ ಮುಖ್ಯ ಎಂದ ಅವರು, ಇಂತಹ ಕಾರ್ಯಾಗಾರ ಹಮ್ಮಿಕೊಳ್ಳುವದರಿಂದ ಬೆಳೆಗಾರರಿಗೆ ಉಪಯೋಗವಾಗಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹೇಳಿದರು.

ಸಿ.ಪಿ.ಸಿ.ಆರ್.ಐ. ಕೇಂದ್ರದ ಹಿರಿಯ ವಿಜ್ಞಾನಿ ಡಾ. ಅಂಕೇಗೌಡ ಕಾಳುಮೆಣಸಿಗೆ ಬರುವ ರೋಗಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಪ್ರಗತಿಪರ ರೈತ ಪೊನ್ನಿಮಾಡ ಸುಬ್ರಮಣಿ, ವಿಷಯ ತಜ್ಞ ಡಾ. ವೀರೇಂದ್ರ ಕುಮಾರ್, ವಿಜ್ಞಾನಿ ಎ.ಎನ್. ಗಣೇಶ ಮೂರ್ತಿ, ಇಲಾಖೆ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾದ ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಬೊಪ್ಪಂಡ ಜಾಲಿ ಬೋಪಯ್ಯ. ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾಂಡಂಡ ಕರುಂಬಯ್ಯ, ವಿ.ಎಸ್.ಎಸ್.ಎನ್. ಅಧ್ಯಕ್ಷ ಎನ್.ಎಸ್. ಉದಯ ಶಂಕರ್, ಹಾಪ್‍ಕಾಮ್ಸ್ ನಿರ್ದೇಶಕ ಪಾಡಿಯಮ್ಮಂಡ ಮನು ಮಹೇಶ್, ಆರ್.ಎಂ.ಸಿ. ಸದಸ್ಯರಾದ ಅಂಬಿ ಕಾರ್ಯಪ್ಪ, ವಾಂಚೀರ ಜಯ ನಂಜಪ್ಪ, ರಮೇಶ್ ಮುದ್ದಯ್ಯ, ಸಹಾಯಕ ತೋಟಗಾರಿಕೆ ಅಧಿಕಾರಿ ಎಸ್.ವಿ. ರಾಮದಾಸ್ ಮತ್ತಿತರರು ಇದ್ದರು.