ಸಿದ್ದಾಪುರ, ಫೆ. 20: ಕಾಡಾನೆ- ಮಾನವ ಸಂಘರ್ಷಕ್ಕೆ ಶಾಶ್ವತ ಯೋಜನೆಯನ್ನು ಸರ್ಕಾರ ರೂಪಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ತಾ.23 ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾ ಹಾಗೂ ಅರಣ್ಯ ಭವನಕ್ಕೆ ಮುತ್ತ್ತಿಗೆ ಹಾಕಲಾಗುವದೆಂದು ಹೋರಾಟ ಸಮಿತಿಯ ಸಂಚಾಲಕ ಮಂಡೇಪಂಡ ಪ್ರವೀಣ್‍ಬೋಪಯ್ಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಕೆಲವು ದಶಕಗಳಿಂದ ಕಾಡಾನೆಗಳ ಹಾವಳಿ ಮೀತಿಮೀರಿದ್ದು ಇದೀಗ ಕೆಲವು ವರ್ಷಗಳಲ್ಲಿ ಕಾಡಾನೆ-ಮಾನವ ಸಂಘರ್ಷ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆಯು ಶಾಶ್ವತ ಯೋಜನೆಯನ್ನು ರೂಪಿಸಬೇಕು ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ತಾ. 23ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾ ಹಾಗೂ ಅರಣ್ಯ ಭವನಕ್ಕೆ ಮುತ್ತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಅಂದು ಬೆಳಿಗ್ಗೆ 10.30 ಕ್ಕೆ ಮಡಿಕೇರಿಯ ಗಾಂಧಿ ಮೈದಾನದಿಂದ ಜಾಥಾ ಪ್ರಾರಂಭವಾಗಿ ನಂತರ ಅರಣ್ಯ ಭವನಕ್ಕೆ ತೆರಳಲಾಗುವದೆಂದರು. ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ ಹಾಗೂ ಜಿಲ್ಲಾ ರೈತ ಸಂಘ ಹಾಗೂ ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವದೆಂದು ಹೇಳಿದರು.

ಉಪಾಧ್ಯಕ್ಷ ಕೆ.ಎಂ. ಕುಶಾಲಪ್ಪ, ಕಾರ್ಯದರ್ಶಿ ಸಿ.ಎಂ. ಸುಜಯ್ ಬೋಪಯ್ಯ, ಕಾರ್ಮಿಕ ಮುಖಂಡ ಮಹದೇವ್, ಸಮಿತಿಯ ಕಾನೂನು ಸಲಹೆಗಾರ ಕೆ.ಬಿ. ಹೇಮಚಂದ್ರ, ಪದಾಧಿಕಾರಿಗಳಾದ ದೇವಣೀರ ಸುಜಯ್, ಎನ್.ಡಿ. ಕುಟ್ಟಪ್ಪ, ಕೆ.ಪಿ. ನಂದಾಗಣಪತಿ, ಕೊಂಗೇರ ಗಪ್ಪಣ್ಣ, ಹೆಚ್.ಬಿ. ರಮೇಶ್, ಎಂ.ಕೆ. ಅರ್ಜುನ್‍ತಿಮ್ಮಯ್ಯ, ರಾಜಗಣಪತಿ, ಇತರರು ಹಾಜರಿದ್ದರು.