ಗುಡ್ಡೆಹೊಸೂರು, ಫೆ. 20: ಗುಡ್ಡೆಹೊಸೂರಿನ ಹಿತರಕ್ಷಣಾ ಯೂತ್ ಕ್ಲಬ್ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಮಾರ್ಚ್ 30,31 ಮತ್ತು ಏಪ್ರಿಲ್ 1 ರಂದು ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ. ಮಾ. 30 ರಂದು 9 ಗಂಟೆಗೆ ಕ್ರೀಡಾಕೂಟ ಉದ್ಘಾಟನೆಗೊಳ್ಳಲಿದೆ. ವಾಲಿಬಾಲ್‍ಗೆ ಪ್ರಥಮ ಬಹುಮಾನ ರೂ. 55,555 ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ. 33,333 ಹಾಗೂ ಟ್ರೋಫಿ, ತೃತೀಯ ಬಹುಮಾನ ರೂ. 11,111. ಥ್ರೋಬಾಲ್‍ಗೆ ಪ್ರಥಮ ಬಹುಮಾನ ರೂ. 11,111, ದ್ವಿತೀಯ ಬಹುಮಾನ ರೂ. 7,777, ತೃತೀಯ ಬಹುಮಾನ ರೂ. 5,555. ಸ್ಥಳೀಯರಿಗೆ ಮಾತ್ರ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಈ ಪಂದ್ಯಾಟ ಗುಡ್ಡೆಹೊಸೂರಿನ ಶಾಲಾ ಮೈದಾನದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂ. 9483086889, 9972020705, 9741466816 ಮಾಹಿತಿ ಪಡೆದುಕೊಳ್ಳಬಹುದು. ಪಂದ್ಯಾಟಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಮಾ. 26 ಕೊನೆಯ ದಿನಾಂಕವಾಗಿದೆ ಎಂದು ಪ್ರಕಟಣೆ ತಿಳಿಸಿದೆ.