*ಗೋಣಿಕೊಪ್ಪಲು, ಫೆ. 20: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತಿತಿಮತಿ ಸರ್ಕಾರಿ ಪ್ರೌಢಶಾಲೆಗೆ ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಬಿ.ವಿ. ಜಯಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಾ.ಪಂ. ಸಾಮಾನ್ಯ ಸಭೆಯಲ್ಲಿ ತಿತಿಮತಿ ಪ್ರೌಢಶಾಲೆಗೆ ಕುಡಿಯುವ ನೀರಿನ ಸಮಸ್ಯೆ ಇದೇ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಲೋಕೇಶ್ ಸಭೆಯಲ್ಲಿ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಸುವದಾಗಿ ಇ.ಓ. ಭರವಸೆ ನೀಡಿದರು. ಅಲ್ಲದೆ ಶಾಲೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಕುಡಿಯುವ ನೀರಿಗೆ ಯಾವದೇ ಸಮಸ್ಯೆ ಆಗದಂತೆ ಟ್ಯಾಂಕ್ ಅಳವಡಿಸಿ ನಿತ್ಯ ನೀರು ಸಿಗುವಂತೆ ಮಾಡಲಾಗುವದು ಎಂದು ಭರವಸೆ ನೀಡಿದರು.

ಈ ಬಾರಿ 10ನೇ ತರಗತಿಯ ಫಲಿತಾಂಶ ಹೆಚ್ಚಿಸಲು ಶಿಕ್ಷಕರು ಪ್ರತಿಯೊಬ್ಬ ಮಕ್ಕಳನ್ನು ತರಬೇತಿಗೊಳಿಸಿ ಉತ್ತೀರ್ಣರಾಗುವಂತೆ ಮಾಡಲು ಶ್ರಮ ವಹಿಸಬೇಕು ಎಂದರು. ತಿತಿಮತಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಭಾಕರ್, ತಾ.ಪಂ. ಸಿಬ್ಬಂದಿ ನಂದೀಶ್ ಮುಖ್ಯ ಶಿಕ್ಷಕ ದಿನೇಶ್ ಹಾಗೂ ಸಹ ಶಿಕ್ಷಕರು ಹಾಜರಿದ್ದರು.