ಗೋಣಿಕೊಪ್ಪಲು, ಫೆ. 21: ದಕ್ಷಿಣ ಕೊಡಗಿನ ಶ್ರೀಮಂಗಲ ಬಳಿಯ ಕುರ್ಚಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಅಗ್ನಿ ದುರಂತ ಸಂಭವಿಸಿದ್ದು, ಮನೆಗೆ ಹಾನಿಯಾಗಿದೆ.ಕುರ್ಚಿ ಗ್ರಾಮ ನಿವಾಸಿ, ಅಜ್ಜಮಾಡ ಪೂಣಚ್ಚ ಎಂಬವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ಯೂರ್ಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಮನೆಯ ಮೇಲಂತಸ್ತಿನ ಕಟ್ಟಡದಲ್ಲಿ ಬೆಂಕಿ ಉರಿದು ಮನೆಯೊಳಗಿದ್ದ ವಸ್ತುಗಳು ಬಹುಪಾಲು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನಿಸಿದರಾದರೂ ಅಗ್ನಿಯ ತೀವ್ರತೆ ಹೆಚ್ಚಾಗಿದ್ದರಿಂದ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಲಾಗಿ, (ಮೊದಲನೆ ಪುಟದಿಂದ) ಗೋಣಿಕೊಪ್ಪ ಅಗ್ನಿಶಾಮಕ ದಳದವರು ಕೂಡಲೇ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರಾದರೂ ಅಷ್ಟರಾಗಲೇ ಮನೆಯ ಬಹುಪಾಲು ಬೆಂಕಿಗೆ ಆಹುತಿಯಾಗಿತ್ತು. ರೈತ ಸಂಘದ ಮುಖಂಡರಾದ ಅಚ್ಚಮಾಡ ಚಂಗಪ್ಪ, ಹ್ಯಾರಿ, ಕಾಶಿ, ಸುಬ್ರಮಣಿ, ಗಣಪತಿ, ಗ್ರಾಮಸ್ಥರು ಹಾಜರಿದ್ದು, ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದರು.
- ವರದಿ: ಜಗದೀಶ್ ಹೆಚ್.ಕೆ.