ಸುಂಟಿಕೊಪ್ಪ, ಫೆ.21 : ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ರಾತ್ರಿ ವೇಳೆ ಕಾಡಾನೆಗಳು ಧಾಳಿ ನಡೆಸುತ್ತಿವೆÉ. ಇತ್ತೀಚೆಗಿನ 2ದಿನದ ಹಿಂದೆ ಐಗೂರು ಗ್ರಾಮದ ಕಾಳೇರಮ್ಮನ ಮೇದಪ್ಪ, ಸೋಮೇಶ, ಸಂಜಯ್ ಅವರ ತೋಟಕ್ಕೆ 3 ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿದಲ್ಲದೆ, ಕಾಫಿ ಗಿಡಗಳನ್ನು ಕಿತ್ತು ಹಾಕಿದಲ್ಲದೆ, ಬಾಳೆಗಿಡವನ್ನು ತಿಂದು ಹಾಕಿದೆ. ಕಾಜೂರು ಮೀಸಲು ಅರಣ್ಯ ಪ್ರದೇಶದಿಂದ ಟಾಟಾ ಎಸ್ಟೇಟಿಗೆ ಪ್ರವೇಶಿಸುತ್ತಿದ್ದ ಕಾಡಾನೆಗಳ ಹಿಂಡು ಈಗ ಐಗೂರು ವಸತಿ ಪ್ರದೇಶದಲ್ಲಿರುವ ತೋಟಗಳಿಗೆ ಪಥ ಬದಲಿಸಿದ್ದು ಜನರಲ್ಲಿ ಭಯ ಭೀತಿ ಉಂಟಾಗಿದೆ. ಅರಣ್ಯ ಇಲಾಖೆಯವರು ಕಾಡಾನೆ ಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕೆಂದು ಗ್ರಾಮಸ್ಥರು, ಕೃಷಿಕರು ಆಗ್ರಹಿಸಿದ್ದಾರೆ.