ಮಡಿಕೇರಿ, ಫೆ. 21: ಕುಶಾಲನಗರ ಆನೆಕಾಡು ಹೆದ್ದಾರಿಯಲ್ಲಿ ಜೀಪೊಂದು (ಕೆಎ 12 ಪಿ 9002) ಚಾಲಕನ ಹತೋಟಿ ತಪ್ಪಿ ಮಗುಚಿಕೊಂಡ ಪರಿಣಾಮ ನಾಪೋಕ್ಲುವಿನ ಮಾರಿಯಪ್ಪ (60) ಎಂಬವರು ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ನಾಪೋಕ್ಲು ಇಂದಿರಾನಗರ ನಿವಾಸಿ ಮಾರಿಯಪ್ಪ ಪಿರಿಯಾಪಟ್ಟಣ ಸಮೀಪದ ಚನಕ್ಕಲ್ನಲ್ಲಿರುವ ತನ್ನ ಮಗಳ ಮನೆಗೆ ತೆರಳಿದ್ದು, ತಡರಾತ್ರಿ 11.40ರ ಸುಮಾರಿಗೆ ಹಿಂದಿರುಗುತ್ತಿದ್ದಾಗ ಜೀಪು ಮಗುಚಿಕೊಂಡ ಪರಿಣಾಮ ಮಾರಣಾಂತಿಕ ಗಾಯಗೊಂಡಿದ್ದಾರೆ. ಈ ಸಂದರ್ಭ ಗಾಯಾಳುವನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕೊನೆಯುಸಿರೆಳಿದ ಬಗ್ಗೆ ಅಲ್ಲಿನ ಸಂಚಾರಿ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.