ಕುಶಾಲನಗರದ ನಿವೃತ್ತ ಶಿಕ್ಷಕÀ ನಂಜುಂಡಸ್ವಾಮಿ (80) ತಾ. 21ರಂದು ನಿಧನರಾದರು. ನಿವೃತ್ತಿಯ ನಂತರವೂ ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕನ್ನಡ ಭಾಷೆ ಸಾಹಿತ್ಯ, ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಟಕೈಕಾಡು ಗ್ರಾಮ ನಿವಾಸಿ, ನಾಯಕಂಡ ಬಿ. ಅಯ್ಯಪ್ಪ (41) ಅವರು ತಾ. 21 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 22 ರಂದು (ಇಂದು) ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.