ಮಡಿಕೇರಿ,ಫೆ.21: ಇತ್ತೀಚೆಗೆ ಮಡಿಕೇರಿಯ ಬ್ರೈನೋಬ್ರೈನ್ ಅಬಾಕಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಗರದ ಹೊಟೇಲ್ ಕೂರ್ಗ್ ಇಂಟರ್ ನ್ಯಾಷನಲ್ನಲ್ಲಿ ನಡೆಯಿತು.ಒಟ್ಟು 21 ಮಕ್ಕಳು ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದು 15ನೇ ತಂಡವಾಗಿದ್ದು ಕಾರ್ಯಕ್ರಮದಲ್ಲಿ ಬ್ರೈನೋಬ್ರೈನ್ ಸಂಸ್ಥೆಯ ಕರ್ನಾಟಕ ವಲಯ ನಿರ್ದೇಶಕ ಆರ್.ರಾಮಕೃಷ್ಣ ಮತ್ತು ಮಡಿಕೇರಿ ಕೇಂದ್ರದ ಮುಖ್ಯಸ್ಥೆ ಮಾಪಂಗಡ ಕವಿತಾ ಕರುಂಬಯ್ಯ ಉಪಸ್ಥಿತರಿದ್ದರು.
ಮಕ್ಕಳ ಮುಂದಿನ ಶೈಕ್ಷಣಿಕ ಹಾದಿ ಸುಗಮವಾಗುವಂತೆ ಪೋಷಕರು ಪ್ರೋತ್ಸಾಹ ನೀಡಿ ಅವರ ಕನಸುಗಳಿಗೆ ರೆಕ್ಕೆ ಒದಗಿಸಿ ಎಂದು ರಾಮಕೃಷ್ಣ ಕಿವಿಮಾತು ಹೇಳಿದರು. ರಾಜ್ಯದಲ್ಲೇ ಅತೀ ಹೆಚ್ಚು ಬ್ರೈನೋಬೈನ್ ಪದವಿ ನೀಡಿದ ಮಡಿಕೇರಿ ಕೇಂದ್ರಕ್ಕೆ ಅತ್ಯುತ್ತಮ ಕೇಂದ್ರವೆಂಬ ಪ್ರಶಸ್ತಿ ಲಭಿಸಿದೆ.
ಪದವಿ ಪಡೆದ ವಿದ್ಯಾರ್ಥಿಗಳು
ವಿಶಾಖ್ ಶ್ರೀನಿವಾಸ್ ಎನ್.ಎ, ಕಾವೇರಮ್ಮ ಎಂ.ಎಸ್, ಗೌತಮ್ ಕೆ.ಜಿ, ಲಿಯೋನ್ ಮುತ್ತಪ್ಪ, ಪೂರ್ವಿ ಎಂ.ಡಿ, ಸುಹಾಸ್ ಸಿ.ಟಿ, ಮೊಹಮ್ಮದ್ ಅನಸ್ ಪಿ.ಎ, ಮೊಹಮ್ಮದ್ ಅಮೀನ್, ಆರ್ಯನ್ ಉತ್ತಪ್ಪ ಎನ್.ಡಿ, ಮೊಹಮ್ಮದ್ ಪೌಝಾನ್ ಪಿ.ಎನ್, ಮಾನ್ಯರಾಜ್ ಎಂ.ಬಿ, ಗಾನವಿ ಎಸ್.ಡಿ, ಶ್ರೇಯಸ್ ಸಿ.ಟಿ, ಅಮೃತಾ ವಿ.ಎನ್, ಜಯಪ್ರಕಾಶ್ ವಿ.ಆರ್, ನಿಯಾ ನಿಲೀಮಾ, ಸುಶಾಂತ್ ಸಿ.ಎಸ್, ನೂಹಾ ಫಾತಿಮಾ ಎಸ್.ಎನ್, ನಿದಾ ಫಾತಿಮಾ ಎಸ್.ಎನ್,ಕಮಲೇಶ್ ಕಾಗ್ ಜಿ ಹಾಗೂ ಅಮೃತ್ ಯಾದವ್ ಬಿ.ಆರ್.