ಮಡಿಕೇರಿ, ಫೆ. 21: ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಕೊಡಗು ಜಿಲ್ಲಾ ನೆಹರು ಯುವ ಕೇಂದ್ರ ಕಚೇರಿಯು ಈ ಹಿಂದೆ ಮಡಿಕೇರಿಯ ಹೊಸ ಬಡಾವಣೆಯಲ್ಲಿ ಕಾರ್ಯನಿರ್ವಹಿಸುತಿತ್ತು. ಇದೀಗ ಕಾವೇರಿ ಬಡಾವಣೆಗೆ ಸ್ಥಳಾಂತರಗೊಂಡಿದ್ದು, ಜಿಲ್ಲೆಯ ಯುವ ಮಂಡಳಗಳು, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕರು ಇನ್ನೂ ಮುಂದೆ ಹೊಸ ವಿಳಾಸವಿರುವ ನೆಹರು ಯುವ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಹೊಸ ಕಚೇರಿ ವಿಳಾಸ : ನೆಹರು ಯುವ ಕೇಂದ್ರ, ಯಶು ನಿಲಯ, ಬ್ಲಾಕ್ ನಂ. 8, ಕಾವೇರಿ ಲೇಔಟ್, ಮಡಿಕೇರಿ - 571 201, ದೂ. 08272-225470