ಬೆಂಗಳೂರು, ಫೆ. 20: ಕೊಡಗು ಜಿಲ್ಲೆಯಲ್ಲಿರುವ ಮುಜರಾಯಿ ದೇವಸ್ಥಾನಗಳ ಅರ್ಚಕ ಹಾಗೂ ಸಿಬ್ಬಂದಿಗಳಿಗೆ ಸಂಭಾವನೆ - ವೇತನÀದ ಜೊತೆಗೆ ಇತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅವರು ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.ಕೊಡಗು ಜಿಲ್ಲೆಯಲ್ಲಿರುವ ಮುಜರಾಯಿ ದೇವಸ್ಥಾನದ ಅರ್ಚಕರಿಗೆ ಹಾಗೂ ಸಿಬ್ಬಂದಿಗಳಿಗೆ ಸಂಭಾವನೆ ಹಾಗೂ ವೇತನ ಅಲ್ಲದೆ ಬೇರೆ ಯಾವ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಕೇಳಿರುವ ಪ್ರಶ್ನೆಗೆ ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಲಿಖಿತ ಉತ್ತರ ನೀಡಿ ಕೊಡಗು ಜಿಲ್ಲೆಯಲ್ಲಿರುವ ಮುಜರಾಯಿ ದೇವಸ್ಥಾನಗಳ ಅರ್ಚಕರುಗಳಿಗೆ ದೇವಸ್ಥಾನದಲ್ಲಿ ಭಕ್ತರು ನೀಡುವ ತಟ್ಟೆಕಾಸು ಸಲ್ಲುತ್ತದೆ.

ಶ್ರೀ ಓಂಕಾರೇಶ್ವರ ದೇವಸ್ಥಾನದ ಸಿಬ್ಬಂದಿಗಳಿಗೆ ಪ್ರತಿ ದಿನ 1 ಸೇರು ಅಕ್ಕಿಯನ್ನು ನೈವೇದ್ಯ ರೂಪದಲ್ಲಿ ನೀಡಲಾಗುತ್ತಿದೆ. ಶ್ರೀ ಭಗಂಡೇಶ್ವರ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ಒಳಾಂಗಣ ಸಿಬ್ಬಂದಿಗಳಿಗೆ ಉಚಿತ ವಿದ್ಯುತ್

(ಮೊದಲ ಪುಟದಿಂದ) ಹಾಗೂ ಮೂಲ ಸೌಕರ್ಯಗಳನ್ನೊಳಗೊಂಡ ವಸತಿಗಳನ್ನು ಒದಗಿಸಲಾಗಿದೆ. ಶ್ರೀ ತಲಕಾವೇರಿ ದೇವಸ್ಥಾನದಲ್ಲಿ ಅರ್ಚಕರಿಗೆ ಸೇವಾ ಕಮಿಷನ್ ಸೌಲಭ್ಯವಿರುತ್ತದೆ. ಶ್ರೀ ಭಗಂಡೇಶ್ವರ - ತಲಕಾವೇರಿ ಜಾತ್ರೆ ಸಮಯದಲ್ಲಿ ಒಂದು ತಿಂಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗುತ್ತಿದೆ ಹಾಗೂ ಇಪಿಎಫ್ ಸೌಲಭ್ಯವನ್ನು ಒದಗಿಸಲಾಗಿರುತ್ತದೆ.

ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದ ಮುಖ್ಯ ಅರ್ಚಕರಿಗೆ ಸೇವಾ ಕಮಿಷನ್ ಹಾಗೂ ಉಚಿತ ವಿದ್ಯುತ್ ಹಾಗೂ ಮೂಲ ಸೌಕರ್ಯಗಳನ್ನೊಳಗೊಂಡ ವಸತಿಗಳನ್ನು ಒದಗಿಸಲಾಗಿದೆ.

ಶ್ರೀ ಪಾಲೂರು ಮಹಾಲಿಂಗೇಶ್ವರ ದೇವಸ್ಥಾನ ಅರ್ಚಕರಿಗೆ ಉಚಿತ ವಿದ್ಯುತ್ ಹಾಗೂ ಮೂಲ ಸೌಕರ್ಯ ಗಳನ್ನೊಳಗೊಂಡ ವಸತಿಗಳನ್ನು ಒದಗಿಸಲಾಗಿದೆ ಎಂದು ಉತ್ತರಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 34,555 ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.

ದೇವಾಲಯಗಳಲ್ಲಿ ಸಂಗ್ರಹವಾದ ಹುಂಡಿ ಹಣವೂ ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹವಾದ ಆದಾಯವನ್ನು ಆಯಾಯ ದೇವಾಲಯದ ನಿರ್ವಹಣೆಗಳಾದ ನಿತ್ಯಕಟ್ಲೆ ಹೆಚ್ಚುಕಟ್ಲೆ, ರಥೋತ್ಸವ, ಸಿಬ್ಬಂದಿ ವೆಚ್ಚ, ಅಭಿವೃದ್ಧಿ ಕಾಮಗಾರಿಗಳಿಗೆ, ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಹಾಗೂ ದೇವಾಲಯ ವತಿಯಿಂದ ನಡೆಸಲ್ಪಡುತ್ತಿರುವ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಇತ್ಯಾದಿಗಳಿಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ 1997ರ ಕಾಯ್ದೆಯ ಕಲಂ 36(1)ರಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡ ಆಯವ್ಯಯದ ಅನ್ವಯ ಬಳಸಲಾಗುತ್ತದೆ.

ಇಲಾಖಾ ವ್ಯಾಪ್ತಿಗೆ ಒಳಪಡುವ ಪ್ರವರ್ಗ ‘ಎ’ ಮತ್ತು ‘ಬಿ’ ದೇವಾಲಯಗಳ ಅರ್ಚಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಆಯಾಯಾ ದೇವಾಲಯದ ಆದಾಯಕ್ಕೆ ಅನುಗುಣವಾಗಿ ಶೇ. 35ರಷ್ಟು ಮೀರದಂತೆ ಸಂಭಾವನೆ, ವೇತನ ನೀಡಲಾಗುತ್ತಿದೆ.

ಪ್ರವರ್ಗ ‘ಸಿ’ ದೇವಾಲಯದ ಅರ್ಚಕರಿಗೆ ತಸ್ಥೀಕ್ ಮೊತ್ತ ಬಿಡುಗಡೆಗೆ ಅನುಸಾರವಾಗಿ ವೇತನ ಪಾವತಿಯಾಗುತ್ತಿದೆ.

ಇಲಾಖಾ ವ್ಯಾಪ್ತಿಗೆ ಒಳಪಡುವ ಪ್ರವರ್ಗ ‘ಎ’ ಮತ್ತು ‘ಬಿ’ ದೇವಾಲಯಗಳ ಅರ್ಚಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಸಂಭಾವನೆ, ವೇತನಗಳನ್ನು ಮಾಹೆಯಾನ ಸಂಬಂಧಪಟ್ಟವರ ಉಳಿತಾಯ ಖಾತೆಗೆ ಆರ್.ಟಿ.ಜಿ.ಎಸ್. ಮೂಲಕ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರವರ್ಗ ‘ಸಿ’ ದೇವಾಲಯದ ಅರ್ಚಕರಿಗೆ ತಸ್ಥೀಕ್ ಮೊತ್ತ ಬಿಡುಗಡೆಗನುಸಾರವಾಗಿ ವೇತನ ಪಾವತಿಯಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಪ್ರವರ್ಗ ‘ಎ’ ಅಧಿಸೂಚಿತ 3 ದೇವಸ್ಥಾನ ಹಾಗೂ ಪ್ರವರ್ಗ ‘ಸಿ’ 4 ದೇವಸ್ಥಾನಗಳು ಸೇರಿದಂತೆ ಒಟ್ಟು 7 ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಒಳಪಡುತ್ತವೆ ಎಂದು ಸಚಿವರು ಉತ್ತರ ನೀಡಿದ್ದಾರೆ.