*ಗೋಣಿಕೊಪ್ಪಲು, ಫೆ. 21: ತ್ಯಾಜ್ಯ ವಿಲೇವಾರಿ ಸಮಸ್ಯೆ ನಗರದ ಜನತೆಯನ್ನು ಮತ್ತೆ ಕಾಡಲು ಪ್ರಾರಂಭಿಸಿದೆ. ಗುತ್ತಿಗೆದಾರ ಹಾಗೂ ಪೌರಕಾರ್ಮಿಕರು ಕೀರೆಹೊಳೆಗೆ ನೇರವಾಗಿ ಕಸವನ್ನು ಸುರಿಯುವ ಮೂಲಕ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ಪೆÇನ್ನಂಪೇಟೆ ರಸ್ತೆ ಮಾರ್ಗದ ಬೈಪಾಸ್ ತಿರುವಿನಲ್ಲಿರುವ ಸೇತುವೆಗೆ ಕಸವನ್ನು ಸುರಿಯುತ್ತಿದ್ದಾಗ ಸಾರ್ವಜ&divound;ಕರು ಆಟೋ ಚಾಲಕ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಪಟ್ಟಣದಲ್ಲಿ ಇರುವ ಎಂಟು ವಾರ್ಡ್ಗಳಲ್ಲಿರುವ ಕಸ ವಿಲೇವಾರಿ ಮಾಡಲು ನೌಷಾದ್ ಎಂಬಾತ&divound;ಗೆ ಪಂಚಾಯಿತಿ ಗುತ್ತಿಗೆ &divound;ೀಡಿದೆ. ಈ ಆದಾರದ ಮೇಲೆ ನಗರ ವ್ಯಾಪ್ತಿಯ ಕಸವನ್ನು ವಿಲೇವಾಗಿ ಮಾಡಲು ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಸೀತಾ ಕಾಲೋ&divound;ಯಲ್ಲಿರುವ ಘಟಕದಲ್ಲಿ ವಿಲೇವಾರಿ ಮಾಡಲು ಅನುಮತಿ &divound;ೀಡಿತ್ತು.
ಆದರೆ ಗುತ್ತಿಗೆದಾರ ನೌಷಾದ್ ಪಟ್ಟಣದಲ್ಲಿ ಹರಿದು ಹೋಗುವ ಕೀರೆ ಹೊಳೆಗೆ ಕಸವನ್ನು ಸುರಿಯುವ ಮೂಲಕ ಮಾಲಿನ್ಯ ಗೊಳಿಸುತ್ತಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿ, ಸದಸ್ಯರು ಮೌನ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಸಮಸ್ಯೆಗೆ ಪರಿಹಾರ &divound;ೀಡಲೇಬೇಕು ಮತ್ತು ಪಂಚಾಯಿತಿ ಕಸ ವಿಲೇವಾರಿ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೀರೆ ಹೋಳೆಗೆ ಸುರಿದ ಕಸವನ್ನು ತೆರವುಗೊಳಿಸಲು ಮುಂದಾಗಬೇಕು ಎಂದು ಪರಿಸರ ಪ್ರೇಮಿ ಮನೆಯಪಂಡ ಅಯ್ಯಪ್ಪ ಒತ್ತಾಯಿಸಿ ಪ್ರತಿಭಟನೆ &divound;ರತರಾದರು.
ಈ ವೇಳೆ ನೂರಾರು ಸಾರ್ವಜ&divound;ಕರ ಗುಂಪು ಸೇರಿ ಗ್ರಾ.ಪಂ. ಸದಸ್ಯೆ ರತಿ ಅಚ್ಚಪ್ಪರವರನ್ನು ಕೂಡಲೇ ಕಸ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಹೇರಿದರು.
ತಕ್ಷಣವೇ ಜೆ.ಸಿ.ಬಿ. ಮೂಲಕ ಕಸ ತೆರವುಗೊಳಿಸಲು ಮುಂದಾದ ಗ್ರಾ.ಪಂ. ಸದಸ್ಯೆ ರತಿ ಅಚ್ಚಪ್ಪ ಜೆ.ಸಿ.ಬಿ. ತಕ್ಷಣವೇ ದೊರಕದ ಕಾರಣ ಪೌರಕಾರ್ಮಿಕರನ್ನು ಸೇತುವೆ ಕೆಳಗೆ ಇಳಿಸಿ ಕಸ ತೆರವುಗೊಳಿಸಲು ಮುಂದಾದರು.
ಈ ಸಂದರ್ಭ ಗ್ರಾ.ಪಂ. ಸದಸ್ಯ ಜೆ.ಕೆ. ಸೋಮಣ್ಣ, ರಾಜಶೇಖರ್, ಕುಲ್ಲಚಂಡ ಬೋಪಣ್ಣ, ಅರುವತ್ತೊಕ್ಲು ಬಿ.ಜೆ.ಪಿ. ಸ್ಥಾ&divound;ೀಯ ಸಮಿತಿ ಅಧ್ಯಕ್ಷ ಮನೆಯಪಂಡ ಸೋಮಣ್ಣ, ಪ್ರಮುಖರಾದ ಗುಮ್ಮಟ್ಟೀರ ಕಿಲನ್, ಮದನ್ ಶೆಟ್ಟಿ ಸೇರಿದಂತೆ ಹಲವು ಸಾರ್ವಜ&divound;ಕರು ಹಾಜರಿದ್ದರು.