ಕುಶಾಲನಗರ, ಫೆ. 21: ಪಟ್ಟಣದ ಕೈಗಾರಿಕೋದ್ಯಮಿಗಳು ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ಅಡಳಿತ ಮಂಡಳಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಕೆ.ಎಸ್ ರಾಜ್‍ಶೇಖರ್, ಉಪಾಧ್ಯಕ್ಷರಾಗಿ ಎಂ.ಎಂ ಶಾಹೀರ್ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.ಸಂಘದ ಅಧ್ಯಕ್ಷರಾಗಿದ್ದ ಟಿ.ಆರ್. ಶರವಣಕುಮಾರ್ ಹಾಗೂ ಉಪಾಧ್ಯಕ್ಷರಾಗಿದ್ದ ರಾಜಶೇಖರ್ ರಾಜೀನಾಮೆ ನೀಡಿದ್ದರು. ಸೋಮವಾರ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎಸ್. ರಾಜಶೇಖರ್ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಎಂ.ಎಂ. ಶಾಹೀರ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಸಂದರ್ಭ ಸಂಘದ ನಿರ್ದೇಶಕರಾದ ಟಿ.ಆರ್. ಶರವಣ ಕುಮಾರ್, ಎನ್.ಕೆ. ಮೋಹನ್ ಕುಮಾರ್, ಕೆ.ಎಸ್. ಮಹೇಶ್, ಜೋಸೆಫ್ ವಿಕ್ಟರ್ ಸೋನ್ಸ್, ಫ್ರಾನ್ಸಿಸ್, ಬಿ.ರಾಧಕೃಷ್ಣ, ರೇಖಾ, ಕವಿತಾ ಇದ್ದರು. ಚುನಾವಣಾ ಅಧಿಕಾರಿಯಾಗಿ ತಾಲೂಕು ಸಹಕಾರ ಇಲಾಖೆಯ ಸಹಕಾರ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್ ಕಾರ್ಯನಿರ್ವಹಿಸಿದರು.