ಗೋಣಿಕೊಪ್ಪ ವರದಿ, ಫೆ. 21 : ಜಿಲ್ಲಾ ಕೃಷಿ ವಿಜ್ಞಾನ ವೇದಿಕೆ ವತಿಯಿಂದ ತಾ. 23 ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ‘ಮೋರ್ ಕ್ರಾಪ್ ಪರ್ ಡ್ರಾಪ್’ ಎಂಬ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ.ಕಾಫಿ ಮತ್ತು ಕಾಳುಮೆಣಸು ಬೆಳೆಗಳಿಗೆ ನೀರಾವರಿ ಮತ್ತು ಪೌಷ್ಟಿಕಾಂಶಗಳ ಬಗ್ಗೆ ತಜ್ಞರಿಂದ ಕಾರ್ಯಾಗಾರವನ್ನು ಅಂದು ಬೆಳಿಗ್ಗೆ 10.30 ಕ್ಕೆ ನೀಡಲಾಗುತ್ತದೆ.ಮೊದಲನೇ ಅಧಿವೇಶನದಲ್ಲಿ ಸೈಂಟಿಫಿಕ್ ಆಗ್ರೋ ಟೆಕ್ನಾಲೋಜಿನ ತಜ್ಞ ಸುನೀಲ್ ತಮಗಲೆ ಅವರು ಕಾಫಿ ಮತ್ತು ಕಾಳುಮೆಣಸು ಬೆಳೆಗಳ ಡಿಎನ್‍ಎಗೆ ವಿಶೇಷ ಒತ್ತು ನೀಡುವದು ಮತ್ತು ನೀರು ಮತ್ತು ನೆರಳಿಗೆ ಒತ್ತು ನೀಡುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ದ್ವಿತೀಯ ಅಧಿವೇಶನದಲ್ಲಿ ಜಿಂದಗಿ ಕಾ ಬೆಸ್ಟ್ ಡಿಸಿಷನ್ ಎಂಬ ವಿಷಯದ ಬಗ್ಗೆ ದೀರೆ ಇಂಡಿಯಾದ ತಜ್ಞ ಸ್ವಾಮಿ ಮಂಜುನಾಥ್ ಮಾಹಿತಿ ನೀಡಲಿದ್ದಾರೆ. ತೃತೀಯ ಅಧಿವೇಶನದಲ್ಲಿ ದಕ್ಷಿಣ ಭಾರತದ ಮುಖ್ಯ ಎಣ್ಣೆ ಬೆಳೆಗಳ ಬಗ್ಗೆ ಬೆಂಗಳೂರು ಸೆಂಟ್ರಲ್ ಇನ್ಸಿಟ್ಯೂಟ್ ಫಾರ್ ಮೆಡಿಕಲ್ ಆಂಡ್ ಆರೋಮೆಟಿಕ್ ಪ್ಲಾಟ್ಸ್ ತಂಡದವರು ಮಾಹಿತಿ ನೀಡಲಿದ್ದಾರೆ.