ಮಡಿಕೇರಿ, ಫೆ. 21: 2017ನೇ ಸಾಲಿನಲ್ಲಿ ವಿಕಲಚೇತನರಿಗೆ ವಿತರಿಸಿರುವ ರಿಯಾಯ್ತಿ ದರದ ಬಸ್‍ಪಾಸ್‍ಗಳ ಅವಧಿ ದಿನಾಂಕ:31-12-2017ಕ್ಕೆ ಮುಕ್ತಾಯಗೊಳ್ಳುವದರಿಂದ ಸದರಿ ಪಾಸ್‍ಗಳನ್ನು 2018ನೇ ಸಾಲಿಗೆ ನವೀಕರಿಸಿಕೊಳ್ಳಬಹುದಾಗಿದೆ. ಸದರಿ ಪಾಸ್‍ಗಳ ಆಧಾರದಲ್ಲಿ ಪೆಬ್ರವರಿ 28 ರ ವರೆಗೆ ಪ್ರಯಾಣಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನೂ ಬಾಕಿ ಇರುವ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್‍ಗಳನ್ನು ನವೀಕರಿಸಿಕೊಳ್ಳಲು ಮೂರು ತಾಲೂಕಿನ ವಿಕಲಚೇತನರಿಗೆ ಎರಡನೇ ಬಾರಿ ಮಡಿಕೇರಿಗೆ ಭೇಟಿ ನೀಡುತ್ತಿದ್ದು ಪೆಬ್ರವರಿ 24 ರಂದು ಮಡಿಕೇರಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ದಿನಾಂಕವನ್ನು ನಿಗದಿಪಡಿಸಿದ್ದು ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸಿದಲ್ಲಿ 1 ವಾರದೊಳಗೆ ನವೀಕರಿಸಿ ಕೊಡಲಾಗುವದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.