ಮಡಿಕೇರಿ, ಫೆ. 22: ಪಡಿತರ ಚೀಟಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದು ಪಡಿತರ ಚೀಟಿ ಪಡೆಯಲು ವಿಳಂಬವಾಗುತ್ತಿರುವದನ್ನು ಗಮನಿಸಿ ತ್ವರಿತವಾಗಿ ಮತ್ತು ಸ್ಥಳದಲ್ಲಿಯೇ ಪಡಿತರ ಚೀಟಿ ನೀಡುವ ಉದ್ದೇಶದಿಂದ ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮವನ್ನು ತಾ. 23 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ ತಿಳಿಸಿದ್ದಾರೆ.
ಹೊಸ ಪಡಿತರ ಚೀಟಿ ಸ್ವೀಕೃತಿ, ಕುಟುಂಬ ಆದಾಯ ಪ್ರಮಾಣ ಪತ್ರ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ತೆರಳಿ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ಪಡಿತರ ಚೀಟಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಗ್ರಾ.ಪಂ.ಗೆ ಅರ್ಜಿದಾರರ ಕುಟುಂಬದ ಯಾರಾದರೊಬ್ಬ ವಯಸ್ಕ ಸದಸ್ಯರು ಹಾಜರಾಗಿ ಬೆರಳಚ್ಚು ನೀಡಿ ಹೊಸ ಪಡಿತರ ಚೀಟಿ ಪಡೆಯಲು ಅವಕಾಶವಿರುತ್ತದೆ. ತಕ್ಷಣ ಹೊಸ ಪಡಿತರ ಚೀಟಿ ನೀಡುವ ಕಾರ್ಯಕ್ರಮದಲ್ಲಿ ಈಗಾಗಲೇ ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಮಾತ್ರ ಸ್ಥಳದಲ್ಲಿ ಹೊಸ ಪಡಿತರ ಚೀಟಿ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಹೊಸ ಅರ್ಜಿ ಸ್ವೀಕರಿಸುವದಿಲ್ಲ ಎಂದು ತಿಳಿಸಿದ್ದಾರೆ.
ಆದರೆ ಇದುವರೆಗೆ ಅರ್ಜಿ ಸಲ್ಲಿಸದಿರುವವರು ಗ್ರಾ. ಪಂ., ಅಟಲ್‍ಜಿ ಜನ ಸ್ನೇಹಿ ಕೇಂದ್ರ ಅಥವಾ ಫೋಟೀ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಿ ಸ್ವೀಕೃತಿ ಕುಟುಂಬ ಆದಾಯ ಪ್ರಮಾಣ ಪತ್ರ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ದಾಖಲೆಗಳೊಂದಿಗೆ ಆಹಾರ ನಿರೀಕ್ಷಕರನ್ನು ಭೇಟಿ ಮಾಡಿ ಪಡಿತರ ಚೀಟಿ ಪಡೆಯಬಹುದು. ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ವಿತರಿಸುವ ಬಹುವರ್ಣದ ಪಡಿತರ ಚೀಟಿಗೆ ಅರ್ಜಿದಾರರು ಯಾವದೇ ಹಣ, ಶುಲ್ಕ ನೀಡಬೇಕಾಗಿಲ್ಲ. ಶಾಶ್ವತ ಪಡಿತರ ಚೀಟಿಗಳನ್ನು ಸ್ಪೀಡ್ ಪೋಸ್ಟ್ ಅಂಚೆ ಮೂಲಕ ಅರ್ಜಿದಾರರ ಮನೆಗೆ ರವಾನಿಸಲಾಗುತ್ತದೆ.
ಸಾರ್ವಜನಿಕರು ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಮಡಿಕೇರಿ ತಾಲೂಕಿನ ಗ್ರಾಮಾಂತರ ಆಹಾರನಿರೀಕ್ಷಕ ಎಸ್. ಸದಾನಂದ 9902756512, ನಗರ ಪ್ರದೇಶದ ಆಹಾರ ನಿರೀಕ್ಷಕಿ ಎಚ್.ವಿ. ಪದ್ಮ 9480238580, ಸೋಮವಾರಪೇಟೆ ತಾಲೂಕಿನ ಆಹಾರ ನಿರೀಕ್ಷಕ ಡಿ. ರಾಜಣ್ಣ 7026364325 ಹಾಗೂ ವೀರಾಜಪೇಟೆ ತಾಲೂಕಿನ ಆಹಾರನಿರೀಕ್ಷಕ ಚಂದ್ರ ನಾಯಕ 7349615953 ಸಂಪರ್ಕಿಸಬುದು.
ಸಾರ್ವಜನಿಕರು ಆಹಾರ ನಿರೀಕ್ಷಕರು ನಿಗದಿ ಪಡಿಸಿರುವ ದಿನಾಂಕದಂದು ಗ್ರಾಮ ಪಂಚಾಯಿತಿಗೆ ತೆರಳಿ ಆಹಾರ ನಿರೀಕ್ಷಕರ ಮೂಲಕ ಹೊಸ ಪಡಿತರ ಚೀಟಿ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಕಾರ್ಯಕ್ರಮ ಪಟ್ಟಿ: ತಾ. 23 ರಂದು (ಇಂದು) ಮಡಿಕೇರಿ ತಾಲೂಕು ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ವರೆಗೆ, ಮೇಕೇರಿಯಲ್ಲಿ ಮಧ್ಯಾಹ್ನ 2 ರಿಂದ 3.30 ರವರೆಗೆ, ಹಾಕತ್ತೂರಿನಲ್ಲಿ ಸಂಜೆ 4 ರಿಂದ 5.30 ರವರೆಗೆ, ತಾ. 24 ರಂದು ಕಡಗದಾಳು ಬೆಳಿಗ್ಗೆ 10 ರಿಂದ 11.30 ರವರೆಗೆ, ಕಳಕೇರಿ ನಿಡುಗಣೆ ಗ್ರಾ.ಪಂ. ಕಚೇರಿಯಲ್ಲಿ ಮಧ್ಯಾಹ್ನ 12.30 ರಿಂದ 1.30 ಗಂಟೆಯವರೆಗೆ ಮಕ್ಕಂದೂರಿನಲ್ಲಿ ಮಧ್ಯಾಹ್ನ 2.30 ರಿಂದ 5.30 ಗಂಟೆಯವರೆಗೆ, ತಾ. 26 ರಂದು ಗಾಳಿಬೀಡುವಿನಲ್ಲಿ ಮಧ್ಯಾಹ್ನ 2.30 ರಿಂದ 5.30 ಗಂಟೆಯವರೆಗೆ, ತಾ. 27 ರಂದು ಮರಗೋಡುವಿನಲ್ಲಿ ಬೆಳಿಗ್ಗೆ 10 ರಿಂದ 11.30 ಗಂಟೆಯವರೆಗೆ, ಹೊಸಕೇರಿಯಲ್ಲಿ ಮಧ್ಯಾಹ್ನ 12 ರಿಂದ 1.30 ಗಂಟೆಯವರೆಗೆ ಹಾಗೂ ಕಾಂತೂರು ಮೂರ್ನಾಡುವಿನಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5.30 ರವರೆಗೆ, ತಾ. 28 ರಂದು ಕೊಣಂಜಗೇರಿಯಲ್ಲಿ ಬೆಳಿಗ್ಗೆ 10 ರಿಂದ 11.30 ರವರೆಗೆ ನರಿಯಂದಡದಲ್ಲಿ ಮಧ್ಯಾಹ್ನ 12.30 ರಿಂದ 5.30 ರವರೆಗೆ, ಮಾರ್ಚ್ 1 ರಂದು ಹೊದ್ದೂರುನಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ, ನಾಪೋಕ್ಲುವಿನಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ, ಮಾರ್ಚ್ 2 ರಂದು ಮಡಿಕೇರಿ ತಾಲೂಕು ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಹಾಗೂ ಬೆಟ್ಟಗೇರಿಯಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ, ಮಾರ್ಚ್ 3 ರಂದು ಬೇಂಗೂರುನಲ್ಲಿ ಬೆಳಿಗ್ಗೆ 10 ರಿಂದ 11.30 ರವರೆಗೆ, ಕುಂದಚೇರಿಯಲ್ಲಿ ಮಧ್ಯಾಹ್ನ 12 ರಿಂದ 1.30 ಗಂಟೆಯವರೆಗೆ ಮತ್ತು ಮದೆಯಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ, ಮಾರ್ಚ್ 5 ರಂದು ಅಯ್ಯಂಗೇರಿಯಲ್ಲಿ ಬೆಳಿಗ್ಗೆ 10 ರಿಂದ 12.30 ವರೆಗೆ, ಭಾಗಮಂಡಲದಲ್ಲಿ ಮಧ್ಯಾಹ್ನ 1 ರಿಂದ ಸಂಜೆ 5.30 ಗಂಟೆಯವರೆಗೆ, ಮಾರ್ಚ್ 6 ರಂದು ಸಂಪಾಜೆಯಲ್ಲಿ ಬೆಳಗ್ಗೆ 10 ರಿಂದ 11.30ರವರೆಗೆ, ಚೆಂಬುವಿನಲ್ಲಿ ಮಧ್ಯಾಹ್ನ 12 ರಿಂದ 1.30 ರವರೆಗೆ, ಪೆರಾಜೆಯಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ, ಮಾರ್ಚ್ 7 ರಂದು ಕರಿಕೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ, ಮಾರ್ಚ್ 8 ರಂದು ಬಲ್ಲಮಾವಟಿಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮತ್ತು ಕುಂಜಿಲದಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ, ಮಾರ್ಚ್ 9 ರಂದು ಮಡಿಕೇರಿ ತಾಲೂಕು ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಹಾಗೂ ಮಾರ್ಚ್ 10 ರಂದು ಎಮ್ಮೆ ಮಾಡುವಿನಲ್ಲಿ ಬೆಳಿಗ್ಗೆ 10 ರಿಂದ 5.30 ರವರೆಗೆ ಪಡಿತರ ಚೀಟಿ ವಿತರಣೆ ಕಾರ್ಯಕ್ರಮ ನಡೆಯಲಿದೆ.