ನಾಪೆÇೀಕ್ಲು, ಫೆ. 22: ಏ. 15ರಂದು ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಲ್ಲೇಟಿರ ಕಪ್ 2018 ನಾಪೆÇೀಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ ಎಂದು ಕುಲ್ಲೇಟಿರ ಹಾಕಿ ನಮ್ಮೆ ಸಮಿತಿ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ ತಿಳಿಸಿದರು.ಈ ಬಗ್ಗೆ ಕುಟುಂಬದ ಐನ್ ಮನೆಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. 22ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಹಾಕಿ ನಮ್ಮೆಯ ಸಾರಥ್ಯವನ್ನು ನಾಪೆÇೀಕ್ಲು ಕುಲ್ಲೇಟಿರ ಕುಟುಂಬ ವಹಿಸಿ ಕೊಂಡಿದ್ದು, ಏ. 15ರಂದು ಬೆಳಿಗ್ಗೆ 10.30 ಗಂಟೆಗೆ ಹಾಕಿ ಪಂದ್ಯಾಟವನ್ನು ಉದ್ಘಾಟಿಸ ಲಾಗುವದು. ಹಾಕಿ ನಮ್ಮೆಯನ್ನು ಸರಳವಾಗಿ ಆಚರಿಸುವದರ ಮೂಲಕ ಖರ್ಚು ವೆಚ್ಚವನ್ನು

(ಮೊದಲ ಪುಟದಿಂದ) ಕಡಿಮೆಗೊಳಿಸಿ ಮಾದರಿ ಹಾಕಿ ನಮ್ಮೆ ಆಚರಿಸಲು ಕ್ರಮಕೈಗೊಳ್ಳಲಾಗುವದು. ಜಿಲ್ಲೆಯ ಎಲ್ಲಾ ಜನತೆ ತನು, ಮನ, ಧನ ಸಹಾಯ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ ಅಂತಿಮ ಪಂದ್ಯಾಟ ಮೇ 13 ರ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣೆಯಂದು ನಡೆಯಲಿರುವ ಪಂದ್ಯಾಟಗಳಲ್ಲಿ ಬದಲಾವಣೆ ಮಾಡಲಾಗುವದು ಎಂದು ಹೇಳಿದರು.

ಸಂಸದ ಪ್ರತಾಪ್ ಸಿಂಹ ಅವರು ಹಾಕಿ ಹಬ್ಬದ ಪ್ರಯುಕ್ತ ರೂ. 20 ಲಕ್ಷ ಮಂಜೂರು ಮಾಡಿದ್ದು ಒಂದು ವಾರದಲ್ಲಿ ಹಣ ಕೈ ಸೇರಲಿದೆ. ರಾಜ್ಯ ಸರಕಾರಕ್ಕೆ 50 ಲಕ್ಷ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಕಾರ್ಯ ಪ್ರಗತಿಯಲ್ಲಿದೆ ಎಂದರು. ಹಾಕಿ ನಮ್ಮೆಗೆ ಸುಮಾರು 1.50 ಕೋಟಿ ರೂ. ವೆಚ್ಚವಾಗಲಿದೆ. ದಾಖಲೆಯ 333 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲು ಪ್ರಯತ್ನಗಳು ನಡೆಯುತ್ತಿದೆ. ಮಾರ್ಚ್ 1 ರಿಂದ ತಂಡಗಳ ನೋಂದಾವಣೆ ಆರಂಭಗೊಳ್ಳಲಿದೆ. ಮುಂದಿನ ಹತ್ತು ದಿನಗಳಲ್ಲಿ ನಾಪೆÇೀಕ್ಲು ಪಟ್ಟಣದಲ್ಲಿ ಕಚೇರಿ ತೆರೆಯಲಾಗುವದು ಎಂದು ಮಾಹಿತಿ ನೀಡಿದರು.

ಉತ್ಸವ ಸಮಿತಿ ಸಂಚಾಲಕ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ 147 ವರ್ಷಗಳ ಇತಿಹಾಸವಿರುವ ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂಸದರ 20 ಲಕ್ಷ ರೂ. ಅನುದಾನದಲ್ಲಿ ಮಿನಿ ಗ್ಯಾಲರಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಚೆರಿಯಪರಂಬು ಕೆ.ಎಸ್.ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ಮೂರು ಲಕ್ಷ ರೂ. ಅನುದಾನ ನೀಡಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.

ಗೋಷ್ಠಿಯಲ್ಲಿ ಕುಲ್ಲೇಟಿರ ಪಟ್ಟೆದಾರ ಮತ್ತು ಸಲಹಾ ಸಮಿತಿ ಹಿರಿಯ ಸದಸ್ಯರಾದ ಕುಲ್ಲೇಟಿರ ಮಾದಪ್ಪ, ಕೆ.ಕೆ.ಗುರುವಪ್ಪ, ಕೆ.ಸಿ.ಮುತ್ತಪ್ಪ. ಹಾಕಿ ಸಮಿತಿ ಸದಸ್ಯರಾದ ಶಂಕರಿ ಚಂಗಪ್ಪ, ನಂದಾ ನಾಚಪ್ಪ, ದೇವಿ ದೇವಯ್ಯ, ರಾಜೇಶ್, ಸುರೇಶ್, ಲೊಕೇಶ್, ರಾಜಾ, ಬಿನ್ನಿ ಬೋಪಣ್ಣ ಇದ್ದರು.