ಮಡಿಕೇರಿ, ಫೆ.22 : ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಚೆರಿಯಪರಂಬು ಮಖಾಂ ಉರೂಸ್ ಫೆ.23 ರಿಂದ 27ವರೆಗೆ ನಡೆಯಲಿದೆ ಎಂದು ಚೆರಿಯಪರಂಬು ಜಮಾಅತ್ ಸಮಿತಿ ಕಾರ್ಯದರ್ಶಿ ಪಿ.ಎಂ. ಅಬ್ದುಲ್ ಕರೀಂ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ತಾ. 23 ರಂದು ಚೆರಿಯಪರಂಬುವಿನ ಖತೀಬ್ ಉಸ್ತಾದ್ ಹನೀಫ್ ಫಾಳಿಲಿ ಉರೂಸ್ನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಚೆರಿಯಪರಂಬು ಜಮಾಅತ್ನ ಅಧ್ಯಕ್ಷÀ ಬಿ.ಎಂ.ಬಷೀರ್ ಹಾಜಿ ಧ್ವಜಾರೋಹಣ ಮಾಡಲಿದ್ದಾರೆ. ಅಂದು ಸಂಜೆ 6 ಗಂಟೆಗೆ ಖತಂ ದುಆ ಕಾರ್ಯಕ್ರಮವನ್ನು ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ಕಿಲ್ಲೂರ್ ತಂಙಳ್ ನೆರವೇರಿಸಲಿದ್ದಾರೆಂದರು.
ತಾ. 23 ಮತ್ತು 24 ರಂದು ರಾತ್ರಿ 8 ಗಂಟೆಗೆ ಪ್ರಖ್ಯಾತ ಝಬೈರ್ ಮಾಸ್ಟರ್ ತೋಟಿಕ್ಕಲ್ ಮತ್ತು ಸಂಗಡಿಗರಿಂದ ಕಥಾ ಪ್ರಸಂಗ ನಡೆಯಲಿದೆ.ಫೆ. 25 ರಂದು ಉಸ್ತಾದ್ ಜಲೀಲ್ ಸಖಾಫಿ ಚೆರುಶೋಲ ಅವರಿಂದ ಹಾಗೂ ತಾ. 26 ರಂದು ಖ್ಯಾತ ವಾಗ್ಮಿ ಉಸ್ತಾದ್ ಯಹ್ಯ ಬಾಖವಿ ಪುಝಕ್ಕರ ಅವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ತಾ.26 ರಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷತೆಯನ್ನು ಜಮಾಅತ್ನ ಅಧ್ಯಕ್ಷ ಬಿ.ಎಂ. ಬಷೀರ್ ಹಾಜಿ ವಹಿಸಲಿದ್ದು, ಬಹು ಉಸ್ತಾದ್ ಅಲ್ ಹಾಜ್ ಕೆ.ಎ. ಮಹಮೂದ್ ಮುಸ್ಲಿಯಾರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕೊಡಗು ಜಂಇಯ್ಯತ್ತುಲ್ ಉಲಮದ ಅಧ್ಯಕ್ಷ ಬಹು ಉಸ್ತಾದ್ ಅಬೂ ಸೂಫಿಯಾನ್ ಇಬ್ರಾಹಿಂ ಮದನಿ ಮುಖ್ಯ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ವಕ್ಫ್ಬೋರ್ಡ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹ್ಮಾನ್, ನಾಪೋಕ್ಲು ಗ್ರಾ.ಪಂ. ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಜಿಪಂ ಸದಸ್ಯ ಪಾಡಿಯಮ್ಮಂಡ ಕೆ. ಮುರಳಿ, ಕೊಟ್ಟಮುಡಿ ಮರ್ಕಝ್ ಪಬ್ಲಿಕ್ ಸ್ಕೂಲ್ನ ಕಾರ್ಯದರ್ಶಿ ಅದವೇಲ್ ಮುಹಮ್ಮದ್ ಹಾಜಿ ಸೇರಿದಂತೆ ಇನ್ನಿತರ ಧಾರ್ಮಿಕ ರಾಜಕೀಯ ವ್ಯಕ್ತಿಗಳು ಭಾಗವಹಿಸಲಿ ದ್ದಾರೆ. ಅಂದು ಸಂಜೆ 4 ಗಂಟೆಗೆ ಅನ್ನದಾನ ನಡೆಯಲಿದೆ.
ಫೆ.27 ರಂದು ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಇದನ್ನು ಉಸ್ತಾದ್ ಅಬ್ದುಲ್ ಹಖೀಂ ಸಖಾಫಿ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಮುಹಮ್ಮದ್ ಸಾಲಿಂ ಸಖಾಫಿ ಅಲ್ ಬುಖಾರಿ, ಕಾಸರಗೋಡಿನ ಬಹು ಉಸ್ತಾದ್ ಸ್ವಾಲಿಹ್ ಸಅದಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳÀಲಿ ದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಬಷೀರ್ ಹಾಜಿ, ಸಹ ಕಾರ್ಯದರ್ಶಿ ಸಿ.ಎಂ. ಉಸ್ಮಾನ್, ಸದಸ್ಯರುಗಳಾದ ಪಿ.ಎ. ಹನೀಫ್, ಪಿ.ಹೆಚ್. ಅಬ್ದುಲ್ ಖಾದರ್ ಉಪಸ್ಥಿತರಿದ್ದರು.