ವೀರಾಜಪೇಟೆ, ಫೆ. 22: ವೀರಾಜಪೇಟೆಯ ಲಯನ್ಸ್ ಕ್ಲಬ್ ಮತ್ತು ಬೆಂಗಳೂರಿನ ಓಟಿಕೇರ್ ಸ್ವೀಚ್ ಅಂಡ್ ಹಿಯರಿಂಗ್ ಸಂಸ್ಥೆ, ಸರಕಾರಿ ಆಸ್ವತ್ರೆಯ ಸಂಯುಕ್ತ ಆಶ್ರಯದಲ್ಲಿ ತಾ. 24 ರಂದು (ನಾಳೆ) ಬೆಳಿಗ್ಗೆ 10.30 ರಿಂದ ಅಪರಾಹ್ನ 2.30 ರವರಗೆ ಉಚಿತ ವಾಕ್ ಮತ್ತು ಶ್ರವಣ ಪರೀಕ್ಷೆಯನ್ನು ವೀರಾಜಪೇಟೆ ಸಾರ್ವಜನಿಕ ಆಸ್ವತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಪಟ್ಟಡ ವಿಕ್ರಂ ಚಂಗಪ್ಪ ತಿಳಿಸಿದ್ದಾರೆ.

ಶ್ರವಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ರೋಗಗಳು, ಧ್ವನಿ ತೊಂದರೆ, ಮಾತಿನ ಉಚ್ಚಾರಣೆಯಲ್ಲಿ ಬದಲಾವಣೆಗೆ ಸಂಬಂಧಿಸಿದ ರೋಗಗಳ ತಪಾಸಣೆ ಮಾಡಲಾಗುತ್ತದೆ . ರೋಗಿಗಳಿಗೆ ಅವಶ್ಯಕತೆ ಇದ್ದಲ್ಲಿ ಆಗತ್ಯ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ. ತಪಾಸಣೆಯ ಬಳಿಕ ಸ್ವೀಚ್ ಅಂಡ್ ಹಿಯರಿಂಗ್ ಸಲಹಾ ಸಮಿತಿ ಸಭೆಯು ನಡೆಯಲಿದೆ ಎಂದು ವಿಕ್ರಮ್ ಚಂಗಪ್ಪ ತಿಳಿಸಿದ್ದಾರೆ.