ಮಡಿಕೇರಿ, ಫೆ. 22: ಇಲ್ಲಿಗೆ ಸಮೀಪದ 2ನೇ ಮೊಣ್ಣಂಗೇರಿ ಶಾಲೆಯ ಬೆಳ್ಳಿ ಮಹೋತ್ಸವವು ತಾ. 23 ರಂದು (ಇಂದು) ಹಾಗೂ ನಾಳೆ ನಡೆಯಲಿದೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 25ನೇ ವಾರ್ಷಿಕೋತ್ಸವ ಕ್ರೀಡಾ ಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿದೇವಿ ಉದ್ಘಾಟಿಸಲಿದ್ದಾರೆ.
ತಾ.ಪಂ. ಸದಸ್ಯ ರಾಯ್ ತಮ್ಮಯ್ಯ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ. ತಾ. 24 ರಂದು (ನಾಳೆ) ಅಪರಾಹ್ನ 2.30 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಶಾಸಕದ್ವಯರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸೇರಿದಂತೆ ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮ ಬಳಿಕ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶಾಲಾ ಬೆಳ್ಳಿ ಮಹೋತ್ಸವ ಸಮಿತಿ ತಿಳಿಸಿದೆ.