ಮಡಿಕೇರಿ, ಫೆ. 22: ರಾಜ್ಯ ಬಾಲಭವನ ಬೆಂಗಳೂರು, ಜಿಲ್ಲಾ ಬಾಲಭವನ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ತಾ. 24 ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಮಕ್ಕಳ ನಾಟಕ ಪ್ರದರ್ಶನವನ್ನು ಅಭಿರಂಗ ಕಾರ್ಯಕ್ರಮದ ಮೂಲಕ ಏರ್ಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ನಾಟಕಗಳ ಮೂಲಕ ಭಾಷೆ, ಸಂಸ್ಕøತಿ, ಸಾಹಿತ್ಯ, ಸಾಮಾಜಿಕ, ಪೌರಾಣಿಕ ಕ್ಷೇತ್ರಗಳಲ್ಲಿ ತೊಡಗಿಸಿ ಅವರಲ್ಲಿನ ಆತ್ಮವಿಶ್ವಾಸ, ನಾಟಕಾಭಿರುಚಿ, ವ್ಯಕ್ತಿತ್ವ ವಿಕಸನ, ಧೈರ್ಯ ಹಾಗೂ ಇತರರೊಂದಿಗೆ ಬೆರೆತು ಮಾನವ ಮೌಲ್ಯಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳ ಪ್ರತಿಭೆಗಳನ್ನು ಹೊರತರಲು ಪ್ರಯತ್ನಿಸಲಾಗುತ್ತಿದೆ.
ಆ ನಿಟ್ಟಿನಲ್ಲಿ ತಾ. 24 ರಂದು ಬೆಳಿಗ್ಗೆ 10.30 ಗಂಟೆಗೆ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಅಭಿರಂಗ ಕಾರ್ಯಕ್ರಮದಲ್ಲಿ 2 ಬೀದಿ ನಾಟಕಗಳ ಪ್ರದರ್ಶನ ಹಾಗೂ ಸಂಜೆ 6 ಗಂಟೆಗೆ ಭಾರತೀಯ ವಿದ್ಯಾಭವನ, ಕೊಡಗು ಕೇಂದ್ರದ ಸಭಾಂಗಣದಲ್ಲಿ ಅಭಿರಂಗ ಕಾರ್ಯಕ್ರಮದ 2 ರಂಗ ಪ್ರದರ್ಶನದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.